ನಟಿ ಐಶ್ವರ್ಯಾ ರೈ ಮತ್ತೇ ಗರ್ಭಿಣಿ?: ಫೋಟೋ ಭಾರಿ ವೈರಲ್

ಮಾಜಿ ವಿಶ್ವ ಸುಂದರಿ, ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತೊಮ್ಮೆ ಗರ್ಭಿಣಿ ಆಗಿದ್ದಾರೆ ಎನ್ನುವ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆಗುತ್ತಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ನಟಿ ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಜೊತೆ ಉದ್ಯಮಿ ಮುಕೇಶ್ ಅಂಬಾನಿ ಸಹೋದರಿ ನೀನಾ ಕಠೋರಿಯ ಮಗಳು ನಯನಾತಾರಾ ಅವರ ಪ್ರೀ-ವೆಡ್ಡಿಂಗ್ ಪಾರ್ಟಿಗೆ ಆಗಮಿಸಿದ್ದರು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ವೇಳೆ ಅಭಿಷೇಕ್ ಕಪ್ಪು ಬಣ್ಣದ ಸೂಟ್ ಧರಿಸಿದ್ದರೆ, ಐಶ್ವರ್ಯಾ ಸಬ್ಯಾಸಾಚಿ ವಿನ್ಯಾಸದ ಕೆಂಪು ಬಣ್ಣದ ಸಲ್ವಾರ್‍ನಲ್ಲಿ ಕಾಣಿಸಿಕೊಂಡಿದ್ದರು. ಐಶ್ವರ್ಯಾ ತಮ್ಮ ಸಲ್ವಾರ್‍ನ ದುಪ್ಪಟ್ಟಾವನ್ನು ಹರಿಡಿಕೊಂಡು ಹಾಕಿದ್ದರು ಎನ್ನಲಾಗಿದೆ. ಈ ಫೋಟೋದಲ್ಲಿ ಐಶ್ವರ್ಯಾ ಹೊಟ್ಟೆ ಮುಚ್ಚಿಕೊಂಡಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಐಶ್ವರ್ಯಾ ಮತ್ತೊಮ್ಮೆ ಗರ್ಭಿಣಿ ಆಗಿದ್ದಾರಾ ಎಂದು ಚರ್ಚೆ ನಡೆಸುತ್ತಿದ್ದಾರೆ.

ಕೆಲವರು ಐಶ್ವರ್ಯಾ ತಮ್ಮ ಬೇಬಿ ಬಂಪ್ ಮುಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಐಶ್ವರ್ಯಾ ಮತ್ತೆ ಗರ್ಭಿಣಿ ಆಗಿದ್ದಾರಾ? ಎಂದು ಕಮೆಂಟ್ ಮಾಡಿದ್ದಾರೆ. ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಐಶ್ವರ್ಯಾ ತಮ್ಮ ಪತಿ ಅಭಿಷೇಕ್ ಜೊತೆ ಸಮಯ ಕಳೆಯಲು ಗೋವಾ ಬೀಚ್‍ಗೆ ಹೋಗಿದ್ದರು.

Image result for Actress Aishwarya Rai is pregnant"

ಈ ವೇಳೆ ಇಬ್ಬರು ನಡೆದುಕೊಂಡು ಹೋಗುತ್ತಿರುವ ಫೋಟೋ ವೈರಲ್ ಆಗಿತ್ತು. ಫೋಟೋ ನೋಡಿ ಅಭಿಮಾನಿಗಳು ಐಶ್ವರ್ಯಾ ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾರೆ ಎಂದು ಹೇಳುತ್ತಿದ್ದರು. ಏಕೆಂದರೆ ಬೀಚ್‍ನಲ್ಲಿ ಐಶ್ವರ್ಯ ಧರಿಸಿದ ಉಡುಪಿನಲ್ಲಿ ಅವರು ಗರ್ಭಿಣಿಯಂತೆ ಕಾಣಿಸುತ್ತಿದ್ದರು.

Image result for Actress Aishwarya Rai is pregnant"

ಹಾಗಾಗಿ ಹೀಗಾಗಿ ಅಭಿಮಾನಿಗಳು ಅವರು ಮತ್ತೆ ಗರ್ಭಿಣಿ ಆಗಿದ್ದಾರೆ ಎಂದುಕೊಂಡಿದ್ದರು. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2011ರಲ್ಲಿ ಐಶ್ವರ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ಆರಾಧ್ಯ ಎಂದು ಹೆಸರನ್ನಿಟ್ಟಿದ್ದಾರೆ.

ಟ್ಯಾಗ್ಸ್:-ನರೇಂದ್ರ ಮೋದಿ ,ಅಮಿತ್‌ ಶಾ ,ಬಿ.ಎಸ್.ಯಡಿಯೂರಪ್ಪ ,ಸಿದ್ದರಾಮಯ್ಯ, ಪುನೀತ್ ರಾಜಕುಮಾರ್,  ಶಾರುಖ್ ಖಾನ್, ಸುದೀಪ್, ಡಿ.ಕೆ.ಶಿವಕುಮಾರ್, ಉಪೇಂದ್ರ

Leave A Comment

Your email address will not be published. Required fields are marked *