ಕ್ರಿಕೆಟ್ ನಿವೃತ್ತಿಯ ನಂತರ ವಿರಾಟ್ ಕೊಹ್ಲಿ ಪ್ಲಾನ್ ಏನ್ ಗೊತ್ತಾ..?

Related image

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆ ಭೂತಾನ್ ಪ್ರವಾಸದಲ್ಲಿದ್ದಾರೆ. ಸದ್ಯ ಕ್ರಿಕೆಟ್​ನಿಂದ ಬ್ರೇಕ್ ಪಡೆದು ಜಾಲಿ ಟ್ರಿಪ್​ ಎಂಜಾಯ್ ಮಾಡುತ್ತಿರುವ ಕೊಹ್ಲಿ, ನಿವೃತ್ತಿಯ ನಂತರ ತಮ್ಮ ಪ್ಲಾನ್ ಏನು ಅನ್ನೋದನ್ನ ಬಹಿರಂಗ ಪಡಿಸಿದ್ದಾರೆ. ತಮ್ಮದೇ ರೆಸ್ಟೋರೆಂಟ್, ಟಿ-ಶರ್ಟ್, ಶೂ, ಪರ್ಫ್ಯೂಮ್ ಬ್ರ್ಯಾಂಡ್ ಹೊಂದಿರುವ ಕೊಹ್ಲಿ, ಕ್ರಿಕೆಟ್​ನಿಂದ ದೂರ ಉಳಿದ ಮೇಲೆ, ಅಡುಗೆ ಮಾಡೋದನ್ನ ಕಲಿಯುತ್ತಾರಂತೆ..!

 ಪಂಜಾಬಿ ಕುಟುಂಬದಲ್ಲಿ ಜನಿಸಿರೋ ವಿರಾಟ್, ಬಾಲ್ಯದಿಂದಲೂ ಸಿಕ್ಕಾಪಟ್ಟೆ ‘ಫುಡ್ಡಿ’ ಆಗಿದ್ದಾರೆ. ವಿಭಿನ್ನ ಬಗೆಯ ಆಹಾರಗಳನ್ನ ತಿನ್ನಲು ಕೊಹ್ಲಿ ಇಷ್ಟಪಡುತ್ತಾರೆ. ಇದಕ್ಕಾಗೇ ಕೊಹ್ಲಿ ಬೇರೆ ಬೇರೆ ಸ್ಥಳಗಳಿಗೂ ಬೇಟಿ ಸಹ ನೀಡುತ್ತಿದ್ರು. ಆದ್ರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊಹ್ಲಿ ಫಿಟ್ನೆಸ್ ಕಾಯ್ದುಕೊಳ್ಳಲು, ಡಯಟ್ ಮಾಡುತ್ತಿದ್ದಾರೆ. ಲಿಮಿಟೆಡ್ ಭೋಜನ ಸೇವಿಸಿ ಡಯಟ್ ಫಾಲೋ ಮಾಡ್ತಿದ್ದಾರೆ. ಆದ್ರೆ ಕೊಹ್ಲಿ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ನಂತರ ‘ಕುಕ್ಕಿಂಗ್’ ಮಾಡೋದನ್ನ ಕಲಿಯುತ್ತಾರಂತೆ. ​

Related image

‘ ನನಗೆ ಅಡುಗೆ ಮಾಡೋಕೆ ಬರೋದಿಲ್ಲ. ಆದ್ರೆ ಕಲಿಯುವ ಆಸಕ್ತಿಯಂತೂ ಸಿಕ್ಕಾಪಟ್ಟೆ ಇದೆ. ನನ್ನ ಕ್ರಿಕೆಟ್ ಕರಿಯರ್ ಮುಗಿದ ಮೇಲೆ, ನಾನು ಕಿಚನ್​ನಲ್ಲೇ ಹೆಚ್ಚು ಕಾಲ ಕಳೆಯಲು ಇಷ್ಟ ಪಡುತ್ತೇನೆ.!’

ವಿರಾಟ್ ಕೊಹ್ಲಿ , ಟೀಮ್ ಇಂಡಿಯಾ ನಾಯಕ

ಟ್ಯಾಗ್ಸ್ : ನರೇಂದ್ರ ಮೋದಿ, ಅಮಿತ್‌ ಶಾ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ , ರಾಜಕುಮಾರ್, ಸುದೀಪ್, ದರ್ಶನ, ಚಿಕ್ಕಣ್ಣ, ಸಲ್ಮಾನ್ ಖಾನ್, ಶಾರುಖಾನ್

Leave A Comment

Your email address will not be published. Required fields are marked *