ಈ ಬಾರಿ CSK ಟೀಮ್ ನಲ್ಲಿ ಭಾರಿ ಬದಲಾವಣೆ ಇದೆ ಎಂದ ಚೆನ್ನೈ ಸೂಪರ್ ಕಿಂಗ್ಸ್..! ಯಾರು ಹೋಗಲಿದ್ದಾರೆ.?

Related image

ಚೆನ್ನೈ : ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿವೆ. ಡಿಸೆಂಬರ್ 19 ರಂದು ಕೋಲ್ಕತಾದಲ್ಲಿ ನಡೆಯಲಿರುವ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನನ್ನು ಖರೀದಿಸಲು ಫ್ರಾಂಚೈಸಿ ಮುಂದಾಗಿದೆ.

ಇದರ ಬೆನ್ನಲ್ಲೇ ತಂಡದಲ್ಲಿನ ಬದಲಾವಣೆಗಳ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಸಹಜ. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಯೊರ್ವ ತನ್ನ ತಂಡದಲ್ಲಿ ಏನಾದರೂ ಬದಲಾವಣೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ CSK ಉತ್ತರ ನೀಡಿದೆ.

Image result for ipl csk

ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿ ವಿಜಯ್ ಟ್ವಿಟರ್ ಮೂಲಕ CSK ತಂಡವನ್ನು ಪ್ರಶ್ನಿಸಿದ್ದಾನೆ. 2020ರ ಐಪಿಎಲ್ ಟೂರ್ನಿಗೆ ಚೆನ್ನೈ ತಂಡದಲ್ಲಿ ಬದಲಾವಣೆ ಏನು ಎಂದು ಕೇಳಿದ್ದಾನೆ.

ಇದಕ್ಕೆ ಉತ್ತರ ನೀಡಿದ Csk, ಖಂಡವಾಗಿಯೂ ಇದೆ. ಅಪ್ಪಂದಿರ ಸೈನ್ಯದ ವಯಸ್ಸು ಒಂದು ವರ್ಷ ಹೆಚ್ಚಾಗಿದೆ ಎಂದು ಪ್ರತಿಕ್ರಿಯೆ ನೀಡಿದೆ.  2019ರ ಐಪಿಎಲ್ ಟೂರ್ನಿ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿದ ಚೆನ್ನೈ ಸೂಪರ್ ಕಿಂಗ್ಸ್, ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು.

Related image

ಇದೀಗ 2020ರಲ್ಲಿ 4ನೇ ಐಪಿಎಲ್ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿರುವ CSK ಬಲಿಷ್ಠ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳ ಮುಂದಾಗಿದೆ.

ಟ್ಯಾಗ್ಸ್:-ನರೇಂದ್ರ ಮೋದಿ ,ಅಮಿತ್‌ ಶಾ ,ಬಿ.ಎಸ್.ಯಡಿಯೂರಪ್ಪ ,ಸಿದ್ದರಾಮಯ್ಯ, ಪುನೀತ್ ರಾಜಕುಮಾರ್, ಶಾರುಖ್ ಖಾನ್, ಸುದೀಪ್, ಡಿ.ಕೆ.ಶಿವಕುಮಾರ್, ಉಪೇಂದ್ರ

Leave A Comment

Your email address will not be published. Required fields are marked *