ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿಯನ್ನೇ ಹಿಂದಿಕ್ಕಿದ ಮಹಿಳಾ ಆಟಗಾರ್ತಿ..! ಕೊಹ್ಲಿ ದಾಖಲೆ ಪುಡಿ ಪುಡಿ..!

Related image

ನವದೆಹಲಿ: ಟೀಮ್​ ಇಂಡಿಯಾದ ಮಹಿಳಾ ಸ್ಟಾರ್​ ಆಟಗಾರ್ತಿ ಸ್ಮೃತಿ ಮಂಧಾನ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದು, ಅತಿ ವೇಗವಾಗಿ 2000 ರನ್​ ದಾಖಲಿಸಿದ ಎರಡನೇ ಭಾರತೀಯಳು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವಿಶೇಷವೆಂದರೆ ಈ ಪಟ್ಟಿಯಲ್ಲಿ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರನ್ನೇ ಸ್ಮೃತಿ ಹಿಂದಿಕ್ಕಿದ್ದಾರೆ.

ಎಡಗೈ ಬ್ಯಾಟ್ಸ್​ಮೆನ್​ ಆಗಿರುವ ಸ್ಮೃತಿ, ಬುಧವಾರ ಸರ್​ ವಿವಿಯನ್​ ರಿಚರ್ಡ್ಸ್​ ಕ್ರೀಡಾಂಗಣದಲ್ಲಿ ವೆಸ್ಟ್​ಇಂಡೀಸ್​ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಇದೇ ಪಂದ್ಯವನ್ನು ಭಾರತ 6 ವಿಕೆಟ್​ಗಳಿಂದ ಅಮೋಘ ಜಯ ಸಾಧಿಸಿತು.​ ​

ಈ ಪಂದ್ಯದಲ್ಲಿ ಅರ್ಧಶತಕದ ನಗೆಬೀರುವ ಮೂಲಕ 23 ವರ್ಷ ವಯಸ್ಸಿನ ಸ್ಮೃತಿ, ಏಕದಿನ ಮಾದರಿ ಪಂದ್ಯದಲ್ಲಿ 2000 ಸಾವಿರ ಗಡಿ ಮುಟ್ಟಲು 51 ಇನ್ನಿಂಗ್ಸ್​ಗಳನ್ನು ತೆಗದುಕೊಂಡರು.

ಈ ಮೂಲಕ ವೇಗವಾಗಿ 2000 ರನ್​ ಗಳಿಸಿದ ಮಹಿಳಾ ಆಟಗಾರ್ತಿಯರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಆಟಗಾರ್ತಿಯರಾದ ಬೆಲಿಂಡಾ ಕ್ಲಾರ್ಕ್(41 ಇನ್ನಿಂಗ್ಸ್​)​ ಮತ್ತು ಮೆಗ್​ ಲ್ಯಾನ್ನಿಂಗ್(45 ಇನ್ನಿಂಗ್ಸ್​)​ ನಂತರ ಮೂರನೇ ಸ್ಥಾನವನ್ನು ಕಾಯ್ದುಕೊಂಡರು. ಸದ್ಯ 51 ಪಂದ್ಯದಿಂದ 43.08 ರನ್​​ ಸರಾಸರಿಯಲ್ಲಿ 2025ರನ್​ ಕಲೆಹಾಕಿರುವ ಸ್ಮೃತಿ, 4 ಶತಕ ಹಾಗೂ 17 ಅರ್ಧಶತಕಗಳನ್ನು ತಮ್ಮ ಬತ್ತಳಿಕೆಯಲ್ಲಿ ಸೇರಿಸಿಕೊಂಡಿದ್ದಾರೆ.

Image result for virat kohli vs shruti mandan

ಸದ್ಯ ಏಕದಿನ ಕ್ರಿಕೆಟ್​ನಲ್ಲಿ ಪುರುಷರ ತಂಡದಲ್ಲಿ ಶಿಖರ್​ ಧವನ್​ ಮಾತ್ರ ಈ ದಾಖಲೆಯನ್ನು ಬರೆದಿದ್ದಾರೆ. ಕೇವಲ 48 ಇನ್ನಿಂಗ್ಸ್​ನಲ್ಲಿ ಧವನ್​ 2000 ರನ್​ ಗುರಿ ಮುಟ್ಟಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಹಶೀಮ್​ ಆಮ್ಲ ಇದ್ದಾರೆ. 2000 ರನ್​ ಗುರಿ ಮುಟ್ಟಲು ಆಮ್ಲ ತೆಗೆದುಕೊಂಡ ಇನ್ನಿಂಗ್ಸ್​ ಕೇವಲ 40

ಟ್ಯಾಗ್ಸ್ : ನರೇಂದ್ರ ಮೋದಿ, ಅಮಿತ್‌ ಶಾ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ , ರಾಜಕುಮಾರ್, ಸುದೀಪ್, ದರ್ಶನ, ಚಿಕ್ಕಣ್ಣ, ಸಲ್ಮಾನ್ ಖಾನ್, ಶಾರುಖಾನ್

Leave A Comment

Your email address will not be published. Required fields are marked *