31ನೇ ವಸಂತಕ್ಕೆ ಕಾಲಿಟ್ಟ ಕಿಂಗ್ ಕೊಹ್ಲಿ; ಕೊಹ್ಲಿ ಟೀಂ ಇಂಡಿಯಾ ನಾಯಕನಾಗಿದ್ದೇ ಆಕಸ್ಮಿಕ!

Related imageಟೀಂ ಇಂಡಿಯಾದ ಯಶಸ್ವಿ ನಾಯಕ, ದಾಖಲೆಗಳ ಸರದಾರ, ವಿರಾಟ್ ಕೊಹ್ಲಿ ಇಂದು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿರಾಟ್​ಗೆ ಎಲ್ಲೆಡೆಯಿಂದ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.

2008ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೊಹ್ಲಿ, ಜಾಗತಿಕ ಕ್ರಿಕೆಟ್​ನಲ್ಲಿ ರನ್ ಮಷಿನ್ ಆಗಿ ಗುರುತಿಸಿಕೊಂಡಿದ್ದಾರೆ. ನಾಯಕನಾಗಿ, ಆಟಗಾರನಾಗಿ ಉಗ್ರ ಪ್ರತಾಪಿ ಎನಿಸಿಕೊಂಡಿರುವ ಕೊಹ್ಲಿ ಎಂದರೆ ತಂಡದ ಇತರೆ ಆಟಗಾರರಿಗೂ ಅಚ್ಚು ಮೆಚ್ಚು.
Image result for cricket-virat-kohli-31st-birthday-specialಕ್ರಿಕೆಟ್ ಲೋಕಕ್ಕೆ ಕಾಲಿಡುತ್ತಿದಂತೆ ಕೊಹ್ಲಿ ಅಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕೊಹ್ಲಿ ಸಾಧನೆ ಶಿಖರದೆತ್ತರಕ್ಕೆ ಬೆಳೆದುನಿಂತಿದೆ. ತನ್ನ ಮೊದಲ ವಿಶ್ವಕಪ್ ಪಂದ್ಯದಲ್ಲೇ ಶತಕವನ್ನು ಬಾರಿಸಿದ ಮೊದಲ ಭಾರತೀಯ ಎಂಬ ಕಿರೀಟ ಕೊಹ್ಲಿ ಮುಡಿಯಲ್ಲಿದೆ.

2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಪಂದ್ಯದಲ್ಲಿ ಕೊಹ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡುವ ಅವಕಾಶ ಪಡೆದರು. ಈ ಪಂದ್ಯದಲ್ಲಿ ಮೊದಲ ಎಸೆತವನ್ನೇ ವೈಡ್ ಎಸೆದ ಕೊಹ್ಲಿ, ಧೋನಿ ಅವರ ಸ್ಟಂಪಿಂಗ್ ನೆರವಿನಿಂದ ವಿಕೆಟ್ ಪಡೆದರು. ಇದರೊಂದಿಗೆ ವಿಶ್ವ ಕ್ರಿಕೆಟ್ ನಲ್ಲಿ 0 ಎಸೆತಕ್ಕೆ ವಿಕೆಟ್ ಪಡೆದ ಬೌಲರ್ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

Virat Kohli Ansuhka Sharmaಕೊಹ್ಲಿ ಕರ್ತವ್ಯ ನಿಷ್ಠೆಗೆ ಅವರ ತಂದೆಯ ಸಾವಿನ ದಿನ ಸಾಕ್ಷಿ. ಕೇವಲ 18 ವರ್ಷ ವಯಸ್ಸಿನವರಾಗಿದ್ದ ಕೊಹ್ಲಿ 2006 ಡಿಸೆಂಬರ್​ನಲ್ಲಿ ತಂದೆಯನ್ನು ಕಳೆದುಕೊಂಡಿದ್ದರು. ಅಂದು ಕರ್ನಾಟಕದ ವಿರುದ್ಧ ಪಂದ್ಯದವಾಡುತ್ತಿದ್ದ ದೆಹಲಿ ತಂಡದ ಕೊಹ್ಲಿಗೆ ತಂದೆಯ ಸಾವಿನ ಸುದ್ದಿ ರಾತ್ರಿಯೇ ತಿಳಿದಿದ್ದರೂ ಮರುದಿನ ಕ್ರೀಡಾಂಗಣಕ್ಕೆ ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಪಂದ್ಯದಲ್ಲಿ ತಂಡಕ್ಕೆ ಮಹತ್ವದ 90 ರನ್ ಕಾಣಿಕೆ ನೀಡಿದ್ದ ಕೊಹ್ಲಿ, ಅಂಪೈರ್ ನೀಡಿದ್ದ ಕೆಟ್ಟ ತೀರ್ಪಿಗೆ ಔಟಾಗಿ ಪೆವಿಲಿಯನ್ ಸೇರಿದ್ದರು.
Image result for cricket-virat-kohli-31st-birthday-specialವಿಶೇಷ ಎಂದರೆ ಕೊಹ್ಲಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕ ಪಟ್ಟ ಸಿಕ್ಕಿದ್ದು ಆಕಸ್ಮಿಕವಾಗಿ. 2013ರಲ್ಲಿ ಆಗಿನ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಗಾಯಗೊಂಡು ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಆಡಲು ಸಾಧ್ಯವಾಗದಿದ್ದಾಗ ಕೊಹ್ಲಿ ನಾಯಕನ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಅಲ್ಲಿಂದ ಇಂದಿನ ವರೆಗೆ ಕೊಹ್ಲಿ ಟೀಂ ಇಂಡಿಯಾಕ್ಕೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡುತ್ತಿದ್ದಾರೆ.

ಟ್ಯಾಗ್ಸ್ : ನರೇಂದ್ರ ಮೋದಿ, ಅಮಿತ್‌ ಶಾ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ , ರಾಜಕುಮಾರ್, ಸುದೀಪ್, ದರ್ಶನ, ಚಿಕ್ಕಣ್ಣ, ಸಲ್ಮಾನ್ ಖಾನ್, ಶಾರುಖಾನ್

Leave A Comment

Your email address will not be published. Required fields are marked *