MeToo: ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್‌‌ರನ್ನು ವಿವಾದಕ್ಕೆ ಎಳೆದ ಬಾಲಿವುಡ್‌ ಗಾಯಕಿ..!

ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಮಾಡಿರುವ ಟ್ವೀಟ್ ಒಂದರ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ ಬಾಲಿವುಡ್‌ನ ಖ್ಯಾತ ಗಾಯಕಿ ಸೋನಾ ಮೊಹಾಪಾತ್ರ. ಕೆಲ ಸಮಯದಿಂದ ಬಾಲಿವುಡ್ ಸಂಗೀತ ಸಂಯೋಜಕ ಅನು ಮಾಲಿಕ್ ಬಗ್ಗೆ ಆರೋಪಗಳನ್ನು ಮಾಡುತ್ತಾ ಸುದ್ದಿಯಲ್ಲಿದ್ದಾರೆ ಸೋನಾ.

Image result for singer sona mohapatraಸಿಂಗಿಂಗ್ ರಿಯಾಲಿಟಿ ಶೋ ‘ಇಂಡಿಯನ್ ಐಡಲ್‌’ ತೀರ್ಪುಗಾರರಾಗಿ ವ್ಯವಹಿಸುತ್ತಿದ್ದಾರೆ ಅನು ಮಾಲಿಕ್. ಇದಕ್ಕೂ ಮುನ್ನ ಈ ಶೋಗೆ ಸೋನಾ ಸಹ ಜಡ್ಜ್ ಆಗಿದ್ದರು. ತನ್ನ ಕರಿಯರ್‌ನ ಆರಂಭದ ದಿನಗಳಲ್ಲಿ ಅನು ಮಾಲಿಕ್ ತನಗೆ ಲೈಂಗಿಕ ಕಿರುಕುಳ ನೀಡಿದ್ದರೆಂದು ವರ್ಷದ ಹಿಂದೆ ಆರೋಪಿಸಿದ್ದರು. ಹಾಗಾಗಿ ಆ ಶೋ ನಿರ್ವಾಹಕರು ಅನು ಅವರಿಗೆ ಗೇಟ್‌ಪಾಸ್ ನೀಡಿದ್ದರು. ಕೆಲ ದಿನಗಳ ಬಳಿಕ ಸೋನಾಗೂ ಇದೇ ಗತಿಯಾಯಿತು.

ಒಂದು ವರ್ಷದ ಬಳಿಕ ಅನು ಅವರನ್ನು ಮತ್ತೆ ಶೋಗೆ ಆಹ್ವಾನಿಸಿ ಜಡ್ಜ್ ಸೀಟ್ ಮೇಲೆ ಕೂರಿಸಲಾಯಿತು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಸೋನಾ. ಭಾರತದಲ್ಲಿ ಇನ್ನೊಂದು ನಿರ್ಭಯಾ ಘಟನೆ ನಡೆಯದ ಹೊರತು ಇಂತಹವರು ಸುಧಾರಿಸಲ್ಲ ಎಂದಿದ್ದರು.

Image result for singer sona mohapatra vs sachin tendulkar

ಈ ಹಿನ್ನೆಲೆಯಲ್ಲಿ ಇಂಡಿಯನ್ ಐಡಲ್ ಶೋನಲ್ಲಿ ಪಾಲ್ಗೊಂಡ ಸ್ಪರ್ಧಿಯೊಬ್ಬರನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ ಸಚಿನ್ ತೆಂಡೂಲ್ಕರ್. “ಈ ಸ್ಪರ್ಧಿ ಹಾಡುಗಳು, ಅವರ ಬದುಕಿನ ಕಥೆ ನನ್ನ ಮನಸ್ಸನ್ನು ತಾಕಿತು. ಎಲ್ಲಿಂದಲೋ ಬಂದ ಇವರೆಲ್ಲಾ ಅತ್ಯುನ್ನತ ಸ್ಥಾನಕ್ಕೇರುತ್ತಾರೆಂಬ ನಂಬಿಕೆ ನನಗಿದೆ” ಎಂದು ಸಚಿನ್ ಟ್ವೀಟ್ ಮಾಡಿ ಹಾರೈಸಿದ್ದಾರೆ.

ಈ ಬಗ್ಗೆ ಸೋನು ಮೊಹಾಪಾತ್ರ ಪ್ರತಿಕ್ರಿಯಿಸಿದ್ದು, “ಸಚಿನ್ ಸಾರ್ ನಿಮಗೆ ಮೀಟೂ ಬಗ್ಗೆ ಏನೂ ಗೊತ್ತಿಲ್ಲವೇ? ನೀವು ಮೆಚ್ಚಿಕೊಂಡಿರುವ ಶೋನಲ್ಲಿ ಅನು ಮಾಲಿಕ್ ಎಂಬ ಕಾಮಾಂಧ ಇದ್ದಾನೆ. ನೀವು ಯಾವಾಗಲೂ ಆ ಶೋನಲ್ಲಿ ಪಾಲ್ಗೊಂಡವವರನ್ನೇ ಮೆಚ್ಚಿಕೊಳ್ಳುತ್ತೀರಾ? ಅನು ಮಾಲಿಕ್‌ರಿಂದ ನಮ್ಮಂತೆ ತೊಂದರೆ ಅನುಭವಿಸಿದ ಮಹಿಳೆಯರ ಬಗ್ಗೆ ಸ್ವಲ್ಫವೂ ಯೋಚಿಸಲ್ಲವೇ?” ಎಂದಿದ್ದಾರೆ ಸೋನಾ. ಆದರೆ ಈ ಬಗ್ಗೆ ಸಚಿನ್ ಪ್ರತಿಕ್ರಿಯಿಸುವ ಗೊಡವೆಗೆ ಹೋಗಿಲ್ಲ.

Image result for singer sona mohapatra vs sachin tendulkar

ಟ್ಯಾಗ್ಸ್ : ನರೇಂದ್ರ ಮೋದಿ, ಅಮಿತ್‌ ಶಾ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ , ರಾಜಕುಮಾರ್, ಸುದೀಪ್, ದರ್ಶನ, ಚಿಕ್ಕಣ್ಣ, ಸಲ್ಮಾನ್ ಖಾನ್, ಶಾರುಖಾನ್

 

Leave A Comment

Your email address will not be published. Required fields are marked *