ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೆ ಧೋನಿ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು?

Image result for sourav ganguly

ಮುಂಬೈ: ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸೌರವ್ ಗಂಗೂಲಿ, ತಾವು ಅಧಿಕಾರದಲ್ಲಿರುವರೆಗೂ ಬಿಸಿಸಿಐನಲ್ಲಿ ಯಾವುದೇ ಲೋಪಗಳು ನಡೆಯದಂತೆ ಕಾರ್ಯ ನಿರ್ವಹಿಸುವ ಭರವಸೆಯನ್ನು ನೀಡಿದರು.

ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ನಿವೃತ್ತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಭಾರತದ ಕ್ರಿಕೆಟ್‍ನಲ್ಲಿ ಎಂಎಸ್ ಧೋನಿ ಅವರಿಗೆ ಪ್ರತ್ಯೇಕ ಸ್ಥಾನವಿದೆ. ಆಟಗಾರನಾಗಿ, ನಾಯಕನಾಗಿ ಟೀಂ ಇಂಡಿಯಾಗೆ ಧೋನಿ ಎಷ್ಟೇ ವಿಜಯಗಳನ್ನೋ ನೀಡಿದ್ದಾರೆ. ಧೋನಿ ಅವರ ವಿಚಾರದಲ್ಲಿ ಬಿಸಿಸಿಐ ಗೌರವಯುತವಾಗಿ ನಡೆದುಕೊಳ್ಳಲಿದೆ.

ಅವರು ಸಾಧನೆಗಳನ್ನು ಬರೆಯುತ್ತ ಕುಳಿತರೆ ‘ವಾವ್’ ಎನಿಸುತ್ತದೆ. ನಾನು ಅಧಿಕಾರದಲ್ಲಿ ಪ್ರತಿಯೊಬ್ಬ ಆಟಗಾರನಿಗೆ ಗೌರವ ಲಭಿಸುತ್ತದೆ. ಆದರೆ ಧೋನಿ ನಿವೃತ್ತಿಯ ಬಗ್ಗೆ ಅವರೇ ತೀರ್ಮಾನ ಕೈಗೊಳ್ಳಬೇಕು. ನನ್ನ ಅಭಿಪ್ರಾಯ ಪ್ರಕಾರ ಚಾಂಪಿಯನ್ಸ್ ಬಹುಬೇಗ ನಿವೃತ್ತಿಯಾಗಬಾರದು. ಇದು ನನ್ನ ಅಭಿಪ್ರಾಯ ಮಾತ್ರವಲ್ಲ, ಇಡೀ ವಿಶ್ವದ ಅಭಿಪ್ರಾಯ ಎಂದರು.

Image result for sourav ganguly

ನಾನು ಕೂಡ ಕ್ರಿಕೆಟ್‍ನಿಂದ ಕೆಲ ಸಮಯ ವಿರಾಮ ಪಡೆದು ಆ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿ 4 ವರ್ಷ ಆಡಿದ್ದೆ. ಶೀಘ್ರವೇ ಧೋನಿ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ತಂಡದ ಕೋಚ್, ನಾಯಕ, ಆಟಗಾರರ ಆಯ್ಕೆ ಎಲ್ಲವೂ ಆಯ್ಕೆ ಸಮಿತಿ ನಿರ್ಧರಿಸುತ್ತದೆ. ಈ ವಿಚಾರದಲ್ಲಿ ಬಿಸಿಸಿಐ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಶೇಷ ಎಂದರೆ ಸೌರವ್ ಗಂಗೂಲಿ ತಾವು ಟೀಂ ಇಂಡಿಯಾ ನಾಯಕರಾಗಿದ್ದ ಸಂದರ್ಭದಲ್ಲಿ ಧರಿಸಿದ್ದ ಸೂಟನ್ನು ಇಂದು ಧರಿಸಿ ಬಂದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಗಂಗೂಲಿ, ನಾನು ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ ಈ ಸೂಟ್ ಧರಿಸಿದ್ದೆ. ಇಂದು ಮತ್ತೆ ಇದೇ ಶೂಟ್ ಧರಿಸಬೇಕೆನಿಸಿತ್ತು. ಆದರೆ ಸೂಟ್ ಇಷ್ಟು ಸಿಡಲವಾಗುತ್ತದೆ ಎಂದು ಕೊಂಡಿರಲಿಲ್ಲ ಎಂದು ನಗೆ ಬೀರಿದರು.

ಕೀ ಟ್ಯಾಗ್ಸ್:ನರೇಂದ್ರ ಮೋದಿ, ದರ್ಶನ್, ರಮೇಶ್ ಜಾರಕಿಹೊಳಿ, ಜಗದೀಶ್ ಶೆಟ್ಟರ್, ಜಗ್ಗೇಶ್, ಅಮೂಲ್ಯ, ಆನಂದ್ ಸಿಂಗ್, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಮಹೇಂದ್ರ ಸಿಂಗ್ ಧೋನಿ, ಶಾರುಖ್ ಖಾನ್, ದೀಪಿಕಾಪಡುಕೋಣೆ, ಅಕ್ಷಯ್ ಕುಮಾರ್

Leave A Comment

Your email address will not be published. Required fields are marked *