‘ಖಡ್ಗ’ ಝಳಪಿಸಿದ ಜಡೇಜಾ, ‘ಕುದುರೆ’ ಓಡಿಸಿದ ಕೊಹ್ಲಿ – ಪಂದ್ಯದ ವೇಳೆ ನಡೆದ ಸಂಭ್ರಮ..!video viral

ಕ್ರಿಕೆಟ್ ಪಂದ್ಯಾವಳಿ ವೇಳೆಯೇ ಕ್ರಿಕೆಟಿಗ ರವೀಂದ್ರ ಜಡೇಜಾ ಖಡ್ಗ ಝಳಪಿಸಿದ್ದರೆ, ಕ್ಯಾಪ್ಟನ್ ವಿರಾಟ್ ಕೊಹ್ಲಿ ಕುದುರೆ ಓಡಿಸಿದ್ದಾರೆ.

ಟೆಸ್ಟ್ ಮ್ಯಾಚ್‌ನಲ್ಲಿ ಜಡೇಜಾ 13ನೇ ಅರ್ಧ ಸೆಂಚುರಿ ಬಾರಿಸಿದ ಹಿನ್ನೆಲೆಯಲ್ಲಿ ಇಂಥದ್ದೊಂದು ಸಂಭ್ರಮ ವ್ಯಕ್ತವಾಗಿದೆ.

ಭಾನುವಾರ ರಾಂಚಿಯಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕ ಟೆಸ್ಟ್ ಪಂದ್ಯದಲ್ಲಿ 50 ರನ್ ಆಗುತ್ತಿದ್ದಂತೆ, ಜಡೇಜಾ ಬ್ಯಾಟ್‌ ಅನ್ನು ಖಡ್ಗದಂತೆ ಬಳಸಿ ಎಂದಿನಂತೆ ತಮ್ಮ ವಿಶಿಷ್ಟ ಶೈಲಿಯಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಡ್ರೆಸ್ಸಿಂಗ್ ರೂಮ್‌ನಿಂದಲೇ ಕುದುರೆ ಓಡಿಸುವ ರೀತಿ ಸನ್ನೆ ಮಾಡಿ ಅವರ ಸಂಭ್ರಮಕ್ಕೆ ಜೊತೆಯಾಗಿದ್ದರು ಕೊಹ್ಲಿ. ಈ ದೃಶ್ಯ ಹಲವರ ಗಮನ ಸೆಳೆದಿದ್ದು ಖುಷಿ ನೀಡಿದೆ.

Image result for virat kohli jadeja dressing room

ಆದರೆ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ದಿನ ಜಡೇಜಾ ಅರ್ಧಶತಕ ಗಳಿಸಿದಾಗ ಎಂದಿನಂತೆ ಕತ್ತಿ ಸೆಲೆಬ್ರೇಷನ್ ಮಾಡುತ್ತಿದ್ದರೆ ಡ್ರೆಸ್ಸಿಂಗ್ ರೂಂನಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಅದಕ್ಕೊಂದು ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ.

Image result for ರಾಂಚಿಯಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್

ಡ್ರೆಸ್ಸಿಂಗ್ ರೂಂನತ್ತ ತಿರುಗಿ ತಮ್ಮ ಎಂದಿನ ಶೈಲಿಯಲ್ಲಿ ಜಡೇಜಾ ಬ್ಯಾಟ್ ತಿರುಗಿಸುತ್ತಿದ್ದರೆ ಇತ್ತ ಕೊಹ್ಲಿ ಕುದುರೆ ಸವಾರಿ ಮಾಡುವಂತೆ ಸನ್ನೆ ಮಾಡಿ ಅದಕ್ಕೊಂದು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೀ ಟ್ಯಾಗ್ಸ್: ನರೇಂದ್ರ ಮೋದಿ ,ಬಿ.ಎಸ್.ಯಡಿಯೂರಪ್ಪ ,ಸಿದ್ದರಾಮಯ್ಯ ,ಮಹೇಂದ್ರ ಸಿಂಗ್ ಧೋನಿ,ರಣವೀರ್ ಸಿಂಗ್ ,ವಿರಾಟ್ ಕೊಹ್ಲಿ,ಅಕ್ಷಯ್ ಕುಮಾರ್,ರಾಹುಲ್ ಗಾಂಧಿ,ಎಚ್.ಡಿ.ಕುಮಾರಸ್ವಾಮಿ,ಸುದೀಪ್, ಡಿ.ಕೆ.ಶಿವಕುಮಾರ್, ಉಪೇಂದ್ರ

Leave A Comment

Your email address will not be published. Required fields are marked *