ಭಾರತಕ್ಕೆ ಸತತ 2ನೇ ಗೆಲುವು; ಪುಣೆಯಲ್ಲಿ ದಕ್ಷಿಣ ಆಫ್ರಿಕಾಗೆ ಸೋಲಿನ ಮುಖಭಂಗ

Image result for india and south africa

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಇಂದು ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಹರಿಣಗಳ ಪಡೆಯನ್ನು ಭಾರತ ಇನ್ನಿಂಗ್ಸ್ ಮತ್ತು 137 ರನ್​ಗಳಿಂದ ಬಗ್ಗುಬಡಿಯಿತು. ಭಾರತದ 601 ರನ್ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ನಿನ್ನೆ ಮೊದಲ ಇನ್ನಿಂಗ್ಸಲ್ಲಿ 275 ರನ್​ಗೆ ಆಲೌಟ್ ಆಗಿದ್ದ ಆಫ್ರಿಕನ್ನರು ಇಂದು ನಾಲ್ಕನೇ ದಿನ ತನ್ನ ಎರಡನೇ ಇನ್ನಿಂಗ್ಸಲ್ಲಿ 189 ರನ್​ಗೆ ಸರ್ವಪತನಗೊಂಡಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆದು ಸರಣಿ ಗೆಲುವನ್ನು ಖಚಿತಪಡಿಸಿಕೊಂಡಿತು.

Image result for india and south africa

ನಿನ್ನೆ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸಲ್ಲಿ 275 ರನ್​ಗೆ ಆಲೌಟ್ ಆದಾಗಲೇ ಭಾರತದ ಗೆಲುವು ನಿಶ್ಚಿತವೆನಿಸಿತ್ತು. ಎರಡನೇ ಇನ್ನಿಂಗ್ಸ್ ಎಷ್ಟು ಕಾಲದವರೆಗೆ ಮುಂದುವರಿಯುತ್ತದೆ ಎಂಬಷ್ಟೇ ಕುತೂಹಲ ಉಳಿದಿತ್ತು. ನಾಲ್ಕನೇ ದಿನದಂದು ನಿರೀಕ್ಷೆಯಂತ ಹರಿಣಗಳ ಪಡೆ ಹೆಚ್ಚು ಪ್ರತಿರೋಧ ತೋರಲಿಲ್ಲ. ಡೀನ್ ಎಲ್ಕರ್, ಟೆಂಬಾ ಬವುಮಾ, ವೆರ್ನೋನ್ ಫಿಲಾಂಡರ್ ಮತ್ತು ಕೇಶವ್ ಮಹಾರಾಜ್ ಹೊರತುಪಡಿಸಿ ಉಳಿದ ಬ್ಯಾಟುಗಾರು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

Image result for india and south africa

3ನೇ ವಿಕೆಟ್​ಗೆ ಎಲ್ಗಾರ್ ಮತ್ತು ಬವುಮಾ ಮಧ್ಯೆ 49 ರನ್ ಜೊತೆಯಾಟ; 6ನೇ ವಿಕೆಟ್​ಗೆ ಎಲ್ಗಾರ್ ಮತ್ತು ಸೆನುರನ್ ಮುತ್ತುಸಾಮಿ ಮಧ್ಯೆ 46 ರನ್ ಜೊತೆಯಾಟ; 8ನೇ ವಿಕೆಟ್​ಗೆ ಫಿಲಾಂಡರ್ ಮತ್ತು ಕೇಶವ್ ಮಹಾರಾಜ್ ಮಧ್ಯೆ 56 ರನ್ ಜೊತೆಯಾಟ ಬಂದಿದ್ದು ನಾಲ್ಕನೇ ದಿನ ಹೈಲೈಟ್ಸ್.

ಇನ್ನು, ಉಮೇಶ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್ ಕಬಳಿಸಿದರು. ಆರ್. ಅಶ್ವಿನ್ 2 ವಿಕೆಟ್ ಪಡೆದು ಭಾರತದ ಗೆಲುವನ್ನು ಖಾತ್ರಿಗೊಳಿಸಿದರು.

ಮೂರು ಟೆಸ್ಟ್ ಪಂದ್ಯಗಳ ಈ ಸರಣಿಯಲ್ಲಿ ಇನ್ನೊಂದು ಪಂದ್ಯವಷ್ಟೇ ಬಾಕಿ ಇದೆ. ಭಾರತ ಸರಣಿ ಗೆಲುವನ್ನು ಖಾತ್ರಿಗೊಳಿಸಿಕೊಂಡಿದೆ. ಆಫ್ರಿಕಾಗೆ ಮಾನ ಉಳಿಸಿಕೊಳ್ಳುವ ಅವಕಾಶವಷ್ಟೇ ಇದೆ. ರಾಂಚಿಯಲ್ಲಿ ಅ. 19ರಿಂದ ಈ ಪಂದ್ಯ ನಡೆಯಲಿದೆ.

ಟೆಸ್ಟ್ ಸರಣಿಗೂ ಮುನ್ನ ಎರಡೂ ದೇಶಗಳ ನಡುವೆ ನಡೆದ 3 ಪಂದ್ಯಗಳ ಟಿ20 ಸರಣಿ ಡ್ರಾನಲ್ಲಿ ಅಂತ್ಯಗೊಂಡಿತು. ಟೆಸ್ಟ್ ಸರಣಿಯ ನಂತರ 3 ಏಕದಿನ ಪಂದ್ಯಗಳ ಸರಣಿಯೂ ನಡೆಯಲಿದೆ. ಮಾರ್ಚ್ 12, 15 ಮತ್ತು 18ರಂದು ಧರ್ಮಶಾಲಾ, ಲಕ್ನೋ ಹಾಗೂ ಕೋಲ್ಕತಾದಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವೆ ಏಕದಿನ ಪಂದ್ಯಗಳು ನಡೆಯಲಿವೆ.

Image result for india and south africa

ಭಾರತ ಮೊದಲ ಇನ್ನಿಂಗ್ಸ್ 156.3 ಓವರ್ 601/5 ಡಿಕ್ಲೇರ್
(ವಿರಾಟ್ ಕೊಹ್ಲಿ ಅಜೇಯ 254, ಮಯಂಕ್ ಅಗರ್ವಾಲ್ 108, ರವೀಂದ್ರ ಜಡೇಜಾ 91, ಅಜಿಂಕ್ಯ ರಹಾನೆ 59, ಚೇತೇಶ್ವರ್ ಪೂಜಾರ 58 ರನ್ – ರಬಡ 93/3)

ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ 105.4 ಓವರ್ 275/10
(ಕೇಶವ್ ಮಹಾರಾಜ್ 72, ಫ್ಯಾಫ್ ಡು ಪ್ಲೆಸಿಸ್ 64, ವೆರ್ನೋನ್ ಫಿಲಾಂಡರ್ ಅಜೇಯ 44, ಕ್ವಿಂಟನ್ ಡಿಕಾಕ್ 31, ಡೀಬ್ರುಯ್ನ್ 30 ರನ್ – ಆರ್. ಅಶ್ವಿನ್ 69/4, ಉಮೇಶ್ ಯಾದವ್ 37/3, ಮೊಹಮ್ಮದ್ ಶಮಿ 44/2)

ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ 67.2 ಓವರ್ 189/10)
(ಡೀನ್ ಎಲ್ಗಾರ್ 48, ಟಿಂಬಾ ಬವುಮಾ 38, ವೆರ್ನೋನ್ ಫಿಲಾಂಡರ್ 37, ಕೇಶವ್ ಮಹಾರಾಜ್ 22 ರನ್ – ಉಮೇಶ್ ಯಾದವ್ 22/3, ರವೀಂದ್ರ ಜಡೇಜಾ 52/3, ಆರ್. ಅಶ್ವಿನ್ 45/2)

 

Leave A Comment

Your email address will not be published. Required fields are marked *