ಅನರ್ಹರ ಶಾಸಕರಿಗೆ ಶಾಕ್ ನೀಡಿದ ಬಿಎಸ್​ವೈ ಸರ್ಕಾರ

ಬೆಂಗಳೂರು: ಉಪ ಚುನಾವಣೆಗೆ ತಡೆ ನೀಡುವ ಮೂಲಕ ಸುಪ್ರೀಂ ಅನರ್ಹರಿಗೆ ಈಗ ರಿಲೀಫ್ ಸಿಕ್ಕಿದೆ. ಆದರೆ ಮುಂದೆ ಉಪಚುನಾವಣೆ ರಾಜ್ಯದಲ್ಲಿ ನಡೆಯುತ್ತಾ ಎನ್ನುವ ಅನುಮಾನ ಈಗ ಎದ್ದಿದೆ.

ಸುಪ್ರೀಂ ಕೋರ್ಟಿನಲ್ಲಿ ತಮ್ಮ ಪರವಾಗಿ ತೀರ್ಪು ಬಂದರೆ ಅನರ್ಹರು ಚುನಾವಣೆ ನಿಂತು ಜಯಗಳಿಸಿ ಮಂತ್ರಿಯಾಗುವ ಕನಸಿನಲ್ಲಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಉಪ ಚುನಾವಣೆ ನಡೆಸದೇ ವಿಧಾನಸಭೆಯಲ್ಲಿ ವಿಸರ್ಜಿಸಿ ಚುನಾವಣೆಗೆ ಹೋಗಲು ಚಿಂತಿಸಿದೆ ಎನ್ನಲಾಗುತ್ತಿದೆ.

Image result for rebel mla supreme court

ಹೌದು, ರಾಜ್ಯ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಬಿಜೆಪಿ ಬೀಸೋ ದೊಣ್ಣೆಯಿಂದ ಪಾರಾಗಿದೆ. ಆದರೆ ಇದೇ ವೇಳೆ ಬಿಎಸ್ ಯಡಿಯೂರಪ್ಪ ಅವರ ಸರ್ಕಾರದ ಅವಧಿ ಕೇವಲ 9 ತಿಂಗಳು ಮಾತ್ರವೇ ಎನ್ನುವ ಪ್ರಶ್ನೆ ಎದ್ದಿದೆ.

ಸದ್ಯ ಚುನಾವಣೆಗೆ ನ್ಯಾಯಾಲಯ ಬ್ರೇಕ್ ಹಾಕಿರುವುದರಿಂದ ಪಕ್ಷದಲ್ಲಿ ಉಂಟಾಗಿದ್ದ ಬಂಡಾಯವನ್ನು ಶಮನ ಮಾಡಲು ನಾಯಕರಿಗೆ ಅವಕಾಶ ಸಿಕ್ಕಿದೆ.

ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಬಂಡಾಯ ನಡುವೆ ಸರ್ಕಾರ ನಡೆಸುವುದು ಅಗತ್ಯತೆ ಹಾಗೂ ಪಕ್ಷದ ವರ್ಚಸ್ಸಿಗೆ ಉಂಟಾಗಬಹುದಾದ ಹಾನಿಯ ಬಗ್ಗೆಯೂ ಚರ್ಚೆ ನಡೆಸಿದೆ. ಈ ಹಿನ್ನೆಲೆಯಲ್ಲಿಯೇ ಉಪಚುನಾವಣೆಗೆ ಅವಕಾಶ ನೀಡದೆ ನೇರ ಚುನಾವಣೆ ಎದುರಿಸುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

Image result for rebel mla supreme court

ಹೈಕಮಾಂಡ್ ಚುನಾವಣೆಯೇ ಸರಿ ಎನ್ನುವ ನಿರ್ಧಾರ ತಗೆದು ಜನವರಿ ಬಳಿಕ ಚುನಾವಣೆ ಹೋಗುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಪರಿಣಾಮ ಫೆಬ್ರವರಿಯಲ್ಲಿ ಚುನಾವಣೆ ಎದುರಿಸುವ ಸಾಧ್ಯತೆ ಇದೆ. ಏಕೆಂದರೆ ಶಾಸಕರ ತಮ್ಮ ಅನರ್ಹತೆಯನ್ನು ಪ್ರಶ್ನೆ ಮಾಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು,

ಪ್ರಕರಣ ಸುದೀರ್ಘ ವಿಚಾರಣೆಗೆ ನ್ಯಾಯಾಲಯ ಮುಂದಾಗಿ ಸಾಂವಿಧಾನಿಕ ಪೀಠ ರಚನೆ ಮಾಡಿದರೆ ಪ್ರಕರಣ ಇತ್ಯರ್ಥವಾಗಬೇಕಾದರೆ ಹಲವು ದಿನಗಳು ಬೇಕಾಗಬಹುದು. ತೆರವಾದ ವಿಧಾನಸಭಾ ಕ್ಷೇತ್ರಗಳನ್ನು 6 ತಿಂಗಳ ಕಾಲ ಖಾಲಿ ಬಿಡುವಂತಿಲ್ಲ. ಹೀಗಾಗಿ ದೀರ್ಘ ಸಮಯಗಳ ಕಾಲ ವಿಚಾರಣೆ ನಡೆಸಲು ಬರುವುದಿಲ್ಲ.

Image result for amit shah modi

ಸದ್ಯ ವಿಧಾನಸಭೆಯಲ್ಲಿ ಬಿಎಸ್‍ಪಿ 1, ಬಿಜೆಪಿ 105, ಕಾಂಗ್ರೆಸ್ 66, ಜೆಡಿಎಸ್ 34 ಶಾಸಕರ ಬಲಾಬಲವನ್ನು ಹೊಂದಿದೆ. ಒಂದು ವೇಳೆ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲದೇ ಇದ್ದರೆ ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ.

ಒಂದೊಮ್ಮೆ 6 ಸ್ಥಾನ ಗೆದ್ದರು ಬಿಜೆಪಿ ಅಲ್ಪ ಬಹುಮತದ ಸರ್ಕಾರ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಬಿಜೆಪಿಯ ಯಾವುದೇ ಶಾಸಕರು ಕೈಕೊಟ್ಟರು ಮತ್ತೆ ಸರ್ಕಾರ ಪತನವಾಗುತ್ತದೆ. ಪರಿಣಾಮ ಇಂತಹ ಸರ್ಕಾರ ಹೊಂದಿರುವುದಕ್ಕಿಂತ ಚುನಾವಣೆ ಎದುರಿಸಿ ಬಹುಮತದ ಸ್ಪಷ್ಟ ಸರ್ಕಾರ ರಚನೆ ಮಾಡುವುದು ಉತ್ತಮ ಎಂಬ ಚರ್ಚೆ ಹೈಕಮಾಂಡ್ ಮಾಡುತ್ತಿದೆ ಎನ್ನಲಾಗುತ್ತಿದೆ.

ಕೀ ಟ್ಯಾಗ್ಸ್: ನರೇಂದ್ರ ಮೋದಿ ,ಬಿ.ಎಸ್.ಯಡಿಯೂರಪ್ಪ ,ಸುದೀಪ್,ಸಿದ್ದರಾಮಯ್ಯ ,ಮಹೇಂದ್ರ ಸಿಂಗ್ ಧೋನಿ,ರಣವೀರ್ ಸಿಂಗ್ ,ವಿರಾಟ್ ಕೊಹ್ಲಿ,ಅಕ್ಷಯ್ ಕುಮಾರ್,ರಾಹುಲ್ ಗಾಂಧಿ,ಎಚ್.ಡಿ.ಕುಮಾರಸ್ವಾಮಿ,

Leave A Comment

Your email address will not be published. Required fields are marked *