ಮಳೆ ಅವಾಂತರಕ್ಕೆ ಗಗನಕ್ಕೇರಿದ ತರಕಾರಿ ಬೆಲೆ! ಟೊಮೇಟೊ ಬೆಲೆ ಎಷ್ಟು ಗೊತ್ತಾ?

Image result for rain affect to vegetables

ದೇಶಾದ್ಯಂತ ಭೀಕರ ಪ್ರವಾಹಕ್ಕೆ ಜನಸಾಮಾನ್ಯರು ತತ್ತರಿಸಿ ಹೋಗಿದ್ದರು. ಅಂತೆಯೇ ಭಾರೀ ಮಳೆಗೆ ಬೆಳೆದ ತರಾಕಾರಿ ಬೆಳೆಗಳು ನಾಶವಾಗಿವೆ. ವರುಣನ ಅವಾಂತರದಿಂದ ರಸ್ತೆಗಳು ಹಾಳಾಗಿದ್ದು, ಮಾರ್ಕೆ್ಟ್​​ಗೆ ತರಕಾರಿ ಸಾಗಟ ಮಾಡಲಾಗುತ್ತಿಲ್ಲ. ಹೀಗಾಗಿ ಸಂಚಾರಿ ವ್ಯವಸ್ಥೆ ಇಲ್ಲದೇ ಮಾರುಕಟ್ಟೆಯಲ್ಲಿ ತರಕಾರಿ ಪೂರೈಕೆ ಕಡಿಮೆಯಾಗಿದೆ. ಇದರಿಂದ ತರಕಾರಿ ಬೆಳೆಯುವವರ ಸಂಖ್ಯೆಯೂ ವಿರಳವಾಗಿದೆ. ಹಾಗಾಗಿ ಎಂದಿನಂತೆಯೇ ತರಕಾರಿ ದರದಲ್ಲಿ ಏರಿಕೆಯಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.

Related image

ಎಪಿಎಂಸಿ ಮಾರುಕಟ್ಟೆ ನಿತ್ಯ ಲೋಡುಗಟ್ಟಲೇ ತರಕಾರಿಯಿಂದ ತುಂಬಿ ತುಳುಕುತ್ತಿತ್ತು. ಒಂದು ವೇಳೆ ತರಕಾರಿ ಬೆಲೆ ದಿಢೀರ್​​ ಕುಸಿತವಾದರೇ ಕೊಳ್ಳುವವರಿಲ್ಲದೆ ಬಿಸಾಡ ಬೇಕಾಗುತ್ತಿತ್ತು. ಆದರೀಗ ತರಕಾರಿ ಬೆಲೆ ಗಗನಕ್ಕೇರಿದೆ. ನೀವೂ ಇಡೀ ಮಾರುಕಟ್ಟೆಯಲ್ಲಿ ಎಲ್ಲಿ ಹುಡುಕಿದರೂ ಕೊಳೆತ ತರಕಾರಿ ಕಣ್ಣಿಗೆ ಕಾಣದಾಗಿದೆ.

Image result for rain affect to vegetables

ಮುಂದಿನ ತಿಂಗಳು ಮದುವೆ, ಗೃಹಪ್ರವೇಶ, ನಾಮಕಾರಣ ಸೇರಿದಂತೆ ಹಲವು ಶುಭಕಾರ್ಯಗಳು ನಡೆಯುತ್ತವೆ. ಅಲ್ಲದೇ ಗಣಪತಿ ಹಬ್ಬದ ಮಾಸ ಆಗಿರುವ ಕಾರಣದಿಂದಾಗಿ ತರಕಾರಿ ಬೇಡಿಕೆ ಇನ್ನೂ ಹೆಚ್ಚಾಗಿದೆ. ಆದರೆ, ಮಾರುಕಟ್ಟೆಗೆ ಮಾತ್ರ ತರಕಾರಿ ಆಗಮಿಸುತ್ತಿಲ್ಲ. ಇದಕ್ಕೆ ಕಾರಣವೇ ಭೀಕರ ಪ್ರವಾಹ. ಹೀಗಾಗಿಯೇ ಸಹಜವಾಗಿ ತರಕಾರಿ ಆವಕದ ಪ್ರಮಾಣ ದಿನೇದಿನೇ ಕಡಿಮೆಯಾಗುತ್ತಿದ್ದಂತೆಯೇ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.
ಕಳೆದ ಎರಡು ಮೂರು ತಿಂಗಳಿನಿಂದಲೂ ತರಕಾರಿ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ಹುರಳಿ ಕಾಯಿ (ಬೀನ್ಸ್‌) ಕಳೆದ ವಾರ ಕೆ.ಜಿ 80ರೂ ಇದ್ದದ್ದು, ಈಗ 100 ಆಗಿದೆ. ಬಟಾಣಿ ಕೆ.ಜಿಗೆ 130 ರೂ. ಇದ್ದದ್ದು, 150ಕ್ಕೆ ಏರಿಕೆ ಕಂಡಿದೆ. ಹಸಿ ಮೆಣಸಿನಕಾಯಿ 50ರಿಂದ 100ಕ್ಕೆ ಜಿಗಿದಿದೆ.

Related image
ಕ್ಯಾರೆಟ್‌ ಕೆ.ಜಿಗೆ 70 ರಿಂದ 80ಕ್ಕೆ, ಟೊಮೇಟೊ ಕೆ.ಜಿಗೆ 35ರಿಂದ 50ಕ್ಕೆ ಏರಿದೆ. ಉಳಿದಂತೆ ಬೆಂಡೆಕಾಯಿ ಕೆ.ಜಿ 100, ಹೂ ಕೋಸು 60, ಮೂಲಂಗಿ 30, ಆಲೂಗಡ್ಡೆ 30, ಈರುಳ್ಳಿ 40, ನುಗ್ಗೆಕಾಯಿ 60, ಬದನೆಕಾಯಿ 50, ಕೆ.ಜಿ ಕಟ್ಟು ಕೊತ್ತಂಬರಿ ಸೊಪ್ಪು 130, ದಂಟಿನ ಸೊಪ್ಪು 15, ನಾಲ್ಕು ವರ್ಷದಿಂದ ಕೆ.ಜಿ 50 ರೂ ಆಸುಪಾಸಿನಲ್ಲಿದ್ದ ಶುಂಠಿ ಬೆಲೆಯಲ್ಲಿ 150 ದಾಟಿದೆ.

ಟ್ಯಾಗ್ಸ್ : ನರೇಂದ್ರ ಮೋದಿ, ಅಮಿತ್‌ ಶಾ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ , ಎಚ್​.ಡಿ. ಕುಮಾರಸ್ವಾಮಿ, ಕ್ರೈಂ, ದರ್ಶನ, ಸನ್ನಿ ಲಿಯೋನ್

 

Leave A Comment

Your email address will not be published. Required fields are marked *