42 ವರ್ಷದ ಮಾಜಿ ವಿಶ್ವ ಸುಂದರಿ 28 ವರ್ಷದ ಬಾಯ್ ಫ್ರೆಂಡ್ ನೊಂದಿಗೆ ಮದುವೆಗೆ ಸಜ್ಜು..!

Image result for sushmita-sen-to-tie-the-knot-with-rohman-shawl-in-a-2019-winter-wedding

ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್ ಈ ವರ್ಷ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿವೆ. ಸುಷ್ಮೀತಾ ಸೇನ್ ಬಾಯ್ ಫ್ರೆಂಡ್, ಮಾಡೆಲ್ ರೋಹ್ಮನ್ ಶಾವ್ಲ್ ಜೊತೆಗೆ ನವೆಂಬರ್ ತಿಂಗಳಿನಲ್ಲಿ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ರೋಹ್ಮನ್ ಮತ್ತು ಸುಷ್ಮೀತಾ ಜೊತೆಗಿನ ಸಾಕಷ್ಟು ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದವು. ಆದರೆ, ಈ ಇಬ್ಬರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದು ಇನಷ್ಟು ಸುದ್ದಿ ಆಗಲು ಕಾರಣವಾಗಿದೆ.

ಸುಷ್ಮೀತಾ ಸೇನ್ ಅವರಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ರೀನಿ ಮತ್ತು ಅಲಿಶಾ. ಟಿವಿ ನಟ ಚಾರು ಆಸೋಪ ಅವರನ್ನು ಸುಷ್ಮೀತಾ ಮದುವೆ ಆಗಿದ್ದರು.

Image result for sushmita-sen-to-tie-the-knot-with-rohman-shawl-in-a-2019-winter-wedding

ಈಗಾಗಲೇ 42 ವರ್ಷದ ಸುಷ್ಮೀತಾ 28 ವರ್ಷದ ರೋಹ್ಮನ್ ಅವರನ್ನು ಮದುವೆ ಆಗುತ್ತಿದ್ದಾರೆ. ಈ ವರ್ಷದ ಕೊನೆಯ ತಿಂಗಳಿನಲ್ಲಿ ಮದುವೆ ಆಗಲು ಈ  ಇಬ್ಬರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸುಷ್ಮಿತಾ ಮತ್ತು ರೋಹ್ಮನ್ ಇಬ್ಬರು 2 ತಿಂಗಳ ರಿಲೇಷನ್ ಆಲ್ಲಿದ್ದಾಗ ಫ್ಯಾಷನ್ ಗಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Image result for sushmita-sen-to-tie-the-knot-with-rohman-shawl-in-a-2019-winter-wedding

ಇದೇ ವೇಳೆ ಮದುವೆ ಬಗ್ಗೆ ಗುಸು ಗುಸು ಮಾತನಾಡಿದ್ದಾರೆ ಎಂದು ಬಾಲಿವುಡ್ ನಲ್ಲಿ ಸುದ್ದಿ ಹರಿದಾಡುತ್ತಿದೆ. ಚಳಿಗಾಲದಲ್ಲಿ ಮದುವೆ ಆಗಲು ಈ ಜೋಡಿ ಸಿದ್ಧರಿದ್ದು ಮದುವೆ ಚಪ್ಪರದಲ್ಲಿ ಈ ಜೋಡಿ ಹೇಗೆ ಸೆಳೆಯಲಿದ್ದಾರೆ ಎಂಬುದಕ್ಕೆ ಇನ್ನು ನವೆಂಬರ್ ತಿಂಗಳವರೆಗೆ ಕಾಯಬೇಕಾಗಿರುವುದು ಸತ್ಯ.

Image result for sushmita-sen-to-tie-the-knot-with-rohman-shawl-in-a-2019-winter-wedding

Leave A Comment

Your email address will not be published. Required fields are marked *