ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಸಾಧಕರ ಸಾಲಿನಲ್ಲಿ ಅಮಿತಾಭ್, ದೀಪಿಕಾ

Image result for amitabh bachchan and deepika padukone

ಯೂ ಗೋವ್ ಸಂಸ್ಥೆ ನಡೆಸಿದ ವಿಶ್ವದ ಅಂತ್ಯದ ಮೆಚ್ಚಿನ ವ್ಯಕ್ತಿಯ ಸರ್ವೆ ಲಿಸ್ಟ್ ಬಹಿರಗಂವಾಗಿದೆ. 2019ರ ಯೂ ಗೋವ್ ಸರ್ವೆಯಲ್ಲಿ ಬಾಲಿವುಡ್ ನಟರು ಟಾಪ್ 20ರ ಪಟ್ಟಿಯಲ್ಲಿ ಸ್ಥಾನ ಪಡೆದು ಮಿಂಚಿದ್ದಾರೆ. ಟಾಪ್ 20ರಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ನಟಿ ದೀಪಿಕಾ ಪಡುಕೋಣೆ ಮುಂಚೂಣಿಯಲ್ಲಿದ್ದಾರೆ.

ಅಂದ್ಹಾಗೆ ಟಾಪ್ 20ರ ಲಿಸ್ಟ್ ನಲ್ಲಿ ಬಾಲಿವುಡ್ ಬಿಗ್ ಬಿ 12ನೆ ಸ್ಥಾನದಲ್ಲಿದ್ರೆ, ನಟಿ ದೀಪಿಕಾ ಪಡುಕೋಣೆ 13ನೇ ಸ್ಥಾನದಲ್ಲಿದ್ದಾರೆ. ಇನ್ನು ನಟ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಕ್ರಮವಾಗಿ 16 ಮತ್ತು 18ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಮಹಿಳೆಯರ ವಿಭಾಗದಲ್ಲಿ ದೀಪಿಕಾ 13ನೇ ಸ್ಥಾನ ಪಡೆದುಕೊಂಡರೆ, ಪ್ರಿಯಾಂಕಾ ಚೋಪ್ರ 14 ಸ್ಥಾನ ಮತ್ತು ನಟಿ ಐಶ್ವರ್ಯ ರೈ 16ನೇ ಸ್ಥಾನದಲ್ಲಿದ್ದಾರೆ.

Image result for amitabh bachchan and deepika padukone

ಈ ಬಾರಿ ಟಾಪ್ 20ರ ಪಟ್ಟಿಯಲ್ಲಿ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಹೊಸದಾಗಿ ಜಾಗ ಪಡೆದುಕೊಂಡಿದ್ದಾರೆ. ಸುಷ್ಮಿತಾ ಸೇನ್ 17ನೇ ಸ್ಥಾನದಲ್ಲಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ನಟ ಅಮಿತಾಭ್ ಬಚ್ಚನ್ ಸ್ಥಾನ ಮೂರಕ್ಕೆ ಕುಸಿದಿದೆ. ಇನ್ನು ನಟಿ ಐಶ್ವರ್ಯ ರೈ ಮತ್ತು ಪ್ರಿಯಾಂಕಾ ಚೋಪ್ರ ಸ್ಥಾನ ಕೂಡ ಕಮ್ಮಿ ಆಗಿದೆ.

ಆದ್ರೆ ದೀಪಿಕಾ ಕಳೆದ ವರ್ಷದಂತೆ 13ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇನ್ನು ಪುರುಷರ ವಿಭಾಗದ ಮೊದಲ ಸ್ಥಾನದಲ್ಲಿ ಮಿಂಚಿದವರನ್ನು ನೋಡುವುದಾದ್ರೆ ಅಮೇರಿಕಾದ ಖ್ಯಾತ ಉದ್ಯಮಿ ಬಿಲ್ ಗೇಟ್ಸ್ ಟಾಪ್ ಒನ್ ನಲ್ಲಿ ಇದ್ದಾರೆ.

Image result for amitabh bachchan and deepika padukone

ಎರಡನೇ ಸ್ಥಾನ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪಾಲಾಗಿದೆ. ವಿಶೇಷ ಅಂದ್ರೆ ಭಾರತದ ಪ್ರಧಾನಿ ನರೇಂದ್ರ ಮೋದಿ 6ನೇ ಸ್ಥಾನದಲ್ಲಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಮೋದಿಯ ಸ್ಥಾನ ಏರಿಕೆಯಾಗಿದೆ. ಇನ್ನು ಮಹಿಳೆಯರ ವಿಭಾಗದಲ್ಲಿ ಟಾಪ್ ಒನ್ ಸ್ಛಾನದಲ್ಲಿ ಮಿಚೆಲ್ ಒಬಾಮ ಇದ್ದಾರೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಎಂಜಲೀನಾ ಜೋಲಿಯನ್ನು ಹಿಂದಿಕ್ಕಿ ಈ ಬಾರಿ ಮೊದಲ ಸ್ಥಾನದಲ್ಲಿ ಮಿಂಚುತ್ತಿದ್ದಾರೆ. ಯು ಕೆ ಮೂಲದ ಯೂ ಗೋವ್ ಸಂಸ್ಥೆ ಪ್ರತೀವರ್ಷ ಈ ಸರ್ವೆಯನ್ನು ಮಾಡುತ್ತಾ ಬಂದಿದೆ. ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಈ ರ್ಯಾಂಕ್ ಅನ್ನು ನೀಡಲಾಗುತ್ತೆ. ಸರಳವಾದ ಪ್ರಶ್ನೆ ಕೇಳಿ ಜನರ ಅಭಿಪ್ರಾಯ ಪಡೆದು ರ್ಯಾಂಕ್ ನೀಡುತ್ತಿದೆ ಯೂ ಗೋವ್.
Amitabh Bachchan, Deepika Padukone

Leave A Comment

Your email address will not be published. Required fields are marked *