ವಾರದಲ್ಲಿ ಮೂರು ದಿನ ಮಂಡ್ಯ ಜನರ ಸಮಸ್ಯೆಗೆ ಮೀಸಲು: ಸಂಸದೆ ಸುಮಲತಾ

Image result for sumalatha ambareesh

ನಾನು ಯಾರನ್ನೂ ಟೀಕಿಸುವುದಿಲ್ಲ. ಜನರು ನನ್ನ ಮೇಲೆ ನಂಬಿಕೆಯಿಟ್ಟು ನನ್ನನ್ನು ಸಂಸದೆಯನ್ನಾಗಿ ಆಯ್ಕೆ ಮಾಡಿದ್ದಾರೆ. ವಾರದಲ್ಲಿ ಮೂರು ದಿನವನ್ನು ನಾನು ಮಂಡ್ಯ ಜನರ ಸಮಸ್ಯೆ ಆಲಿಸಲು ಮೀಸಲಿಡುತ್ತೇನೆ ಎಂದು ಸುಮಲತಾ ಹೇಳಿದ್ದಾರೆ.

ಮಂಡ್ಯದ ಕೀಲಾರದಲ್ಲಿ ನೂತನ ಸಂಸದೆ ಸುಮಲತಾ ಪ್ರತಿಕ್ರಿಯಿಸಿ, ‘ಈಗಾಗಲೇ ಮಂಡ್ಯದಲ್ಲಿ ಮನೆ ಮಾಡಿ ಆಗಿದೆ. ಸದ್ಯದಲ್ಲೇ ಅಲ್ಲಿ ವಾಸ್ತವ್ಯ ಮಾಡುತ್ತೇನೆ. ನಾನೇ ಎಲ್ಲಾ ಕ್ಷೇತ್ರಕ್ಕೂ ಸಂಚಾರ ಮಾಡುತ್ತೇನೆ. ವಾರದಲ್ಲಿ ಮೂರು ದಿನ ಜನರ ಸಮಸ್ಯೆಗಾಗಿ ಮೀಸಲಿಡುತ್ತೇನೆ. ಸದ್ಯ ಈಗ ಅಧಿವೇಶನ ಆರಂಭವಾಗಲಿದೆ, ಅದಕ್ಕಾಗಿ ಸ್ವಲ್ಪ ಕಷ್ಟ ಆಗುತ್ತಿದೆ. ಕಚೇರಿ ಮತ್ತು ಸಿಬ್ಬಂದಿ ವ್ಯವಸ್ಥೆ ಆದ ಬಳಿಕ ಕಚೇರಿ ತೆರೆದು ಜನರ ಸಮಸ್ಯೆ ಆಲಿಸುತ್ತೇನೆ’ ಎಂದರು.

Image result for sumalatha ambareesh

ಜೆಡಿಎಸ್ ಶಾಸಕನ ಜೊತೆಗೆ ವೇದಿಕೆ ಹಂಚಿಕೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಜಿಲ್ಲೆಯ ಅಭಿವೃದ್ಧಿಗಾಗಿ ನಾನು ಯಾವಾಗಲೂ ಹೊಂದಾಣಿಕೆಗೆ ಸಿದ್ಧ ಎಂದರು. ಚುನಾವಣೆ ಸಂದರ್ಭದಲ್ಲೂ ನಾನು ಯಾರ ಬಗ್ಗೆಯೂ ಕೀಳಾಗಿ ಮಾತನಾಡಿಲ್ಲ. ಈಗಲೂ ನಾನು ಯಾರ ಬಗ್ಗೆಯೂ ಮಾತನಾಡಲ್ಲ. ನನಗೆ ಜನ ಜವಾಬ್ದಾರಿ ಕೊಟ್ಟಿದ್ದಾರೆ. ಕೆಲಸ ಮಾಡಿಕೊಂಡು ಹೋಗುತ್ತೇನೆ’ ಎಂದು ಹೇಳಿದರು.

Image result for sumalatha ambareesh
ಬರ, ನೀರಿನ ಸಮಸ್ಯೆ ಹೆಚ್ಚಿದೆ. ಅದನ್ನು ಬಗೆಹರಿಸುವತ್ತ ಗಮನಹರಿಸಬೇಕು. ರಾಜಕಾರಣ ಮಾಡೋ ಸಮಯ ಇದಲ್ಲ. ಟೀಕೆಗಳಿಗೆ ಉತ್ತರ ಕೊಡುತ್ತಾ ಸಮಯ ಹರಣ ಮಾಡುವುದಿಲ್ಲ ಎಂದರು.

Image result for sumalatha ambareesh

Leave A Comment

Your email address will not be published. Required fields are marked *