ಬ್ಯಾಟ್ ಮೇಲಕ್ಕೆ ಎಸೆದು ವೈಡ್ ಗೆರೆಯಲ್ಲಿ ನಿಂತ ಪೋಲಾರ್ಡ್‌ಗೆ ದಂಡ!

Image result for pollard

ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕೀರಾನ್ ಪೋಲಾರ್ಡ್ ಆನ್ ಫೀಲ್ಡ್ ನಲ್ಲಿ ತೋರಿದ ವರ್ತನೆಗೆ ಪಂದ್ಯದ ರೆಫ್ರೀ ಪಂದ್ಯದ ಶೇ.25 ರಷ್ಟು ಶುಲ್ಕವನ್ನು ದಂಡ ವಿಧಿಸಿದ್ದಾರೆ.

ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದ ಮುಂಬೈ ಇನ್ನಿಂಗ್ಸ್ ನ ಅಂತಿಮ ಓವರಿನಲ್ಲಿ ಘಟನೆ ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾವೋ ಬೌಲ್ ಮಾಡಿದ್ದರು.

ಈ ಹಂತದಲ್ಲಿ ಮೊದಲ 2 ಎಸೆತಗಳು ಡಾಟ್ ಆಗಿದ್ದು, ಆದರೆ 3ನೇ ಎಸೆತ ವೈಡ್ ಎಂದು ಭಾವಿಸಿ ಹೊಡೆಯದೇ ಬಿಟ್ಟಿದ್ದರು. ಆದರೆ ಅಂಪೈರ್ ವೈಡ್ ಘೋಷಿಸಿರಲಿಲ್ಲ. ಇದಕ್ಕೆ ಅಸಮಾಧಾನಗೊಂಡ ಪೋಲಾರ್ಡ್ ಬ್ಯಾಟನ್ನು ಮೇಲಕ್ಕೆ ಎಸೆದು ಸಿಟ್ಟು ಹೊರ ಹಾಕಿದ್ದರು.

4ನೇ ಎಸೆತದ ವೇಳೆ ಪೋಲಾರ್ಡ್ ಆಫ್ ಸೈಡ್ ವೈಡ್ ಗೆರೆ ಬಳಿ ಬ್ಯಾಟ್ ಹಿಡಿದು ನಿಂತಿದ್ದರು. ಬ್ರಾವೋ ಬೌಲಿಂಗ್ ಮಾಡುವ ವೇಳೆ ಬ್ಯಾಟಿಂಗ್ ತಯಾರಾಗಿ ನಿಂತು ಕೊನೆ ಕ್ಷಣದಲ್ಲಿ ಕ್ರೀಸಿನಿಂದ ಹೊರ ನಡೆದಿದ್ದರು. ಈ ವರ್ತನೆಯನ್ನು ನೋಡಿದ ಇಬ್ಬರು ಅಂಪೈರ್ ಪೊಲಾರ್ಡ್ ಬಳಿ ಬಂದು ಮಾತುಕತೆ ನಡೆಸಿದ್ದರು.

Image result for pollard

ಅಂಪೈರ್ ನಿರ್ಧಾರದ ವಿರುದ್ಧ ನಡೆದುಕೊಂಡ ಪರಿಣಾಮ ರೆಫ್ರಿ ಪಂದ್ಯದ ಶೇ.25 ರಷ್ಟು ಸಂಭಾವನೆಯನ್ನು ದಂಡವಾಗಿ ವಿಧಿಸಿದ್ದಾರೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಪೋಲಾರ್ಡ್ ಲೆವಲ್ 1 ನಿಯಮವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಆದ್ದರಿಂದಲೇ ಈ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Related image

Leave A Comment

Your email address will not be published. Required fields are marked *