IPL ಹೀರೋ ಸೇರಿ 3 ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟ CSK?

IPL: 2018ರ ಐಪಿಎಲ್ ಹೀರೋ ಸೇರಿ 3 ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟ CSK?

ಬೆಂಗಳೂರು : ಇಂಡಿಯನ್ ಪ್ರೀಮಿಯನ್ ಲೀಗ್​ನ ಯಶಸ್ವಿ ತಂಡದ ಪೈಕಿ ಎರಡನೇಯದಾಗಿ ಗುರುತಿಸಿಕೊಂಡಿರುವುದು ಎಂ ಎಸ್ ಧೋನಿ ನಾಯತ್ವದ ಚೆನ್ನೈ ಸೂಪರ್ ಕಿಂಗ್ಸ್​.

ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸಿಎಸ್​ಕೆ ಪ್ರತಿಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ಟೀಂ ಕೂಡ ಹೌದು. ಸದ್ಯ ಚೆನ್ನೈ ತನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.

ಇಂಗ್ಲಿಷ್ ಪತ್ರಿಕೆಯೊಂದು ಮಾಡಿರುವ ವರದಿ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್​ ತಂಡ ಪ್ರಮುಖ ಮೂವರು ಆಟಗಾರರನ್ನು ತಂಡದಿಂದ ಕೈಬಿಡಲು ನಿರ್ಧಾರ ಮಾಡಿದೆಯಂತೆ.
Chennai Super Kings Set to Release Ambati Rayudu, Kedar Jadhav And Murali Vijay Ahead of IPL Auction?
2018ರ ಐಪಿಎಲ್​ನಲ್ಲಿ ಗರಿಷ್ಠ ರನ್ ಕಲೆಹಾಕಿ ಮಿಂಚಿದ ಅಂಬಾಟಿ ರಾಯುಡುರನ್ನು ಚೆನ್ನೈ ರಿಲೀಸ್ ಮಾಡಲು ಮುಂದಾಗಿದೆಯಂತೆ. ಇವರ ಜೊತೆಗೆ ಕೇದರ್ ಜಾಧವ್ ಹಾಗೂ ಮುರಳಿ ವಿಜಯ್​ ಅವರನ್ನು ಕೂಡ ಚೆನ್ನೈ ಕೈಬಿಡುವ ತೀರ್ಮಾನ ಮಾಡಿದೆಯಂತೆ.

ಕಳೆದ ಸೀಸನ್​ನಲ್ಲಿ ಈ ಮೂವರು ಆಟಗಾರರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಅಂಬಟಿ ರಾಯುಡು ವಿಶ್ವಕಪ್​ ವೇಳೆ ಕ್ರಿಕೆಟ್​ನಿಂದ ನಿವೃತ್ತಿ ಪಡೆದು ಮತ್ತೆ ಹಿಂಪಡೆದಿದ್ದಾರೆ. ಸದ್ಯ ಇದುವೇ ರಾಯುಡುಗೆ ಮುಳುವಾಗಿದ್ದು, ಫಾರ್ಮ್​ಕೂಡ ಕಳೆದುಕೊಂಡಿದ್ದಾರೆ.

ಮುರಳಿ ವಿಜಯ್​ಗೆ ಕಳೆದ ಐಪಿಎಲ್​ನಲ್ಲಿ ಅಷ್ಟೊಂದು ಅವಕಾಶ ಸಿಕ್ಕಿರಲಿಲ್ಲ. ಇತ್ತ ಜಾಧವ್ ನಿಧಾನಗತಿಯ ಆಟವಾಡಿದ್ದರು. ಇದನ್ನೆಲ್ಲ ಮನಗಂಡು ಸಿಎಸ್​ಕೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಆದರೆ, ಚೆನ್ನೈ ಫ್ರಾಂಚೈಸಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ನವೆಂಬರ್ 14 ರಂದು ಚೆನ್ನೈ ಸೂಪರ್ ಕಿಂಗ್ಸ್​ ತಂಡದಿಂದ ಕೈಬಿಟ್ಟ ಹಾಗೂ ತನ್ನಲ್ಲೆ ಉಳಿಸಿಕೊಂಡ ಆಟಗಾರರ ಬಗ್ಗೆ ಅಂತಿಮ ಪಟ್ಟಿ ಬಿಡುಗಡೆಗೊಳಿಸಲಿದೆ. ರಾಯುಡು, ವಿಜಯ್ ಹಾಗೂ ಜಾಧವ್ ಜೊತೆ ಶಾರ್ದೂಲ್ ಠಾಕೂರ್ ಮತ್ತು ಕರ್ಣ್​ ಶರ್ಮಾ ಹೆಸರು ಕೂಡ ಕೇಳಿಬರುತ್ತಿದೆ.

Image result for csk

ಧೋನಿ ಟೀಂ 13ನೇ ಆವೃತ್ತಿಯಲ್ಲಿ ಹೊಸ ತಂಡ ರಚನೆ ಮಾಡುವ ಅಂದಾಜು ಮಾಡಿಕೊಂಡಂತಿದೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಟ್ಯಾಗ್ಸ್ : ನರೇಂದ್ರ ಮೋದಿ, ಅಮಿತ್‌ ಶಾ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ , ರಾಜಕುಮಾರ್, ಸುದೀಪ್, ದರ್ಶನ, ಚಿಕ್ಕಣ್ಣ, ಸಲ್ಮಾನ್ ಖಾನ್, ಶಾರುಖಾನ್

Leave A Comment

Your email address will not be published. Required fields are marked *