ಗಲ್ಲಿಯಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ಕೊಹ್ಲಿ ವಿಡಿಯೋ

Image result for virat-kohli-spotted-playing-gully-cricket-ahead-of-indore

ಇಂದೋರ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಗೆ  ಆರಂಭ. ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಕ್ಕಳೊಂದಿಗೆ ಗಲ್ಲಿಯಲ್ಲಿ ಕ್ರಿಕೆಟ್ ಆಡಿ, ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

ಟೆಸ್ಟ್ ಪಂದ್ಯಕ್ಕಾಗಿ ಭಾರತ ಮತ್ತು ಬಾಂಗ್ಲಾದೇಶ ತಂಡವು ಸೋಮವಾರ ಇಂದೋರ್ ತಲುಪಿದೆ. ವಿರಾಟ್ ಕೊಹ್ಲಿ ಮಂಗಳವಾರ ಬಿಚೋಲಿಯ ಶ್ರೀಜಿ ವ್ಯಾಲಿ ಕ್ಯಾಂಪಸ್ ತಲುಪಿದ್ದಾರೆ. ಇಲ್ಲಿ ಕೊಹ್ಲಿ ಜಾಹೀರಾತನ್ನು ಚಿತ್ರೀಕರಿಸಿ, ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಈ ವೇಳೆ ವಿರಾಟ್ ನೋಡಲು ಸಾಕಷ್ಟು ಜನರು ಸೇರಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಧ್ಯಪ್ರದೇಶದ ಹೋಳ್ಕರ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ತಂಡವು ಮಂಗಳವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಅಭ್ಯಾಸ ನಡೆಸಿದೆ. ಬಳಿಕ ಭಾರತ ತಂಡವು ಮಧ್ಯಾಹ್ನ 2 ಗಂಟೆಗೆ ಕ್ರೀಡಾಂಗಣವನ್ನು ತಲುಪಿ, ಸಂಜೆ 5 ರವರೆಗೆ ಅಭ್ಯಾಸ ನಡೆಸಿದೆ.

ಏಕದಿನ, ಟಿ-20 ಪಂದ್ಯಗಳಂತೆ ಟೆಸ್ಟ್ ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳು ಹೆಚ್ಚಾಗಿ ಆಸಕ್ತಿ ತೋರುವುದಿಲ್ಲ. ಟೆಸ್ಟ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಇರುತ್ತಾರೆ. ಆದರೆ ನವೆಂಬರ್ 14ರಂದು ಹೋಳ್ಕರ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಪಂದ್ಯ ವೀಕ್ಷಿಸಲು ಟಿಕೆಟ್ ಖರೀದಿಗೆ ಜನ ಹೆಚ್ಚು ಆಸಕ್ತಿ ತೋರಿದ್ದಾರೆ.

Image result for virat-kohli-spotted-playing-gully-cricket-ahead-of-indore

ಹೀಗಾಗಿ ಪ್ರತಿದಿನವೂ ಟಿಕೆಟ್ ತೆಗೆದುಕೊಳ್ಳುವವರ ಸಾಲು ಕಾಣಿಸುತ್ತಿದೆ. ಟಿಕೆಟ್ ಮಾರಾಟವು ಇಂದು ಮಧ್ಯಾಹ್ನ 12 ರಿಂದ ಪ್ರಾರಂಭವಾಗಿದೆ. ಒಬ್ಬ ವ್ಯಕ್ತಿಯು ಯಾವುದೇ ಎರಡು ದಿನಗಳವರೆಗೆ ಏಕಕಾಲದಲ್ಲಿ ಟಿಕೆಟ್ ಖರೀದಿಸಬಹುದು.

ಟ್ಯಾಗ್ಸ್ : ನರೇಂದ್ರ ಮೋದಿ, ಅಮಿತ್‌ ಶಾ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ , ರಾಜಕುಮಾರ್, ಸುದೀಪ್, ದರ್ಶನ, ಚಿಕ್ಕಣ್ಣ, ಸಲ್ಮಾನ್ ಖಾನ್, ಶಾರುಖಾನ್

Leave A Comment

Your email address will not be published. Required fields are marked *