ಸಿನಿಮಾ ಶೈಲಿಯಲ್ಲಿ ಅವಳು ಓಡಿ ಬಂದ್ಲು, ಕುರಿಗಾಯಿ ಕಟ್ಟೆ ಬಿಟ್ಟ..! ವಿಡಿಯೋ

ಚಿತ್ರದುರ್ಗ: ಸಾಮಾನ್ಯವಾಗಿ ಪ್ರೇಮಿಗಳು ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆಯಾಗುವುದನ್ನು ನೋಡಿದ್ದೇವೆ. ಆದರೆ ಜಿಲ್ಲೆಯ ಹಿರಿಯೂರು ತಾಲೂಕಿನ ಸೀಗೆಹಟ್ಟಿಯಲ್ಲಿ ಸಿನಿಮಾ ಶೈಲಿಯಲ್ಲಿ ವಿಭಿನ್ನವಾಗಿ ಪ್ರೇಮ ವಿವಾಹವಾಗಿದೆ.

ಕುರಿಗಾಹಿ ಅರುಣ್ ಜೊತೆ ಎಂಎ ಪದವಿ ವಿದ್ಯಾರ್ಥಿನಿ ಅಮೃತಾ ಪ್ರೇಮ ವಿವಾಹ ಮಾಡಿಕೊಂಡಿದ್ದಾಳೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾಗಿದೆ. ಆದರೆ ಪೋಷಕರ ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಓಡಿಬಂದು ಇಬ್ಬರು ಮದುವೆಯಾಗಿದ್ದಾರೆ.

ವಿಶೇಷ ಎಂದರೆ ಕುರಿಮೇಯಿಸುವ ಸ್ಥಳದಲ್ಲೇ ಈ ಜೋಡಿಯ ವಿವಾಹವಾಗಿದೆ. ಇದೀಗ ನಿನಿಮಾ ಮಾದರಿ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹುಡುಗ ಕುರಿಮೇಯಿಸುತ್ತಿರುತ್ತಾನೆ. ಇತ್ತ ಹುಡುಗಿ ಅಮೃತಾ ಓಡಿ ಬಂದಿದ್ದಾಳೆ. ಆಗ ಅರುಣ್ ತಕ್ಷಣ ಹಿಂದೆ ಮುಂದೆ ಯೋಚನೆ ಮಾಡದೇ ಏಕಾಏಕಿ ತಾಳಿಕಟ್ಟಿದ್ದಾನೆ. ಇದನ್ನೂ ವಿಡಿಯೋದಲ್ಲಿ ನೋಡಬಹುದಾಗಿದೆ.

ಕುರಿಗಾಹಿ ಜೊತೆ ಪ್ರೇಮಾಂಕುರ | Lover Marriage Viral Video | Chitradurga | TV5 Kannada

ಕುರಿಗಾಹಿ ಜೊತೆ ಪ್ರೇಮಾಂಕುರ | Lover Marriage Viral Video | Chitradurga | TV5 Kannada#Lovemarriage #Chitradurga #Kannadanews #TV5Kannada

TV5 Kannada 发布于 2019年11月9日周六

ಅಮೃತಾ ತುಮಕೂರಿನಲ್ಲಿ ಎಂಎ ಓದುತ್ತಿದ್ದರು. ಅರಣ್ ಸೀಗೆಹಟ್ಟಿ ಗ್ರಾಮದ ನಿವಾಸಿಯಾಗಿದ್ದು, ಕುರಿಗಾಹಿಯಾಗಿದ್ದನು ಎಂದು ತಿಳಿದು ಬಂದಿದೆ.

ಟ್ಯಾಗ್ಸ್:-ನರೇಂದ್ರ ಮೋದಿ ,ಅಮಿತ್‌ ಶಾ ,ಬಿ.ಎಸ್.ಯಡಿಯೂರಪ್ಪ ,ಸಿದ್ದರಾಮಯ್ಯ, ಪುನೀತ್ ರಾಜಕುಮಾರ್, ಶಾರುಖ್ ಖಾನ್, ಸುದೀಪ್, ಡಿ.ಕೆ.ಶಿವಕುಮಾರ್, ಉಪೇಂದ್ರ

Leave A Comment

Your email address will not be published. Required fields are marked *