ನಾಳೆ ಎರಡನೇ ಟಿ-20; ಟೀಂ ಇಂಡಿಯಾದಲ್ಲಿ ಮೂರು ಪ್ರಮುಖ ಬದಲಾವಣೆ..?

Imageಬಾಂಗ್ಲಾದೇಶ ವಿರುದ್ಧದ ಸರಣಿಯನ್ನು ಕೆಟ್ಟದಾಗಿ ಆರಂಭಿಸಿರುವ ಟೀಂ ಇಂಡಿಯಾ ಮೊದಲ ಟಿ-20 ಪಂದ್ಯದಲ್ಲೇ ಸೋಲುಂಡಿತ್ತು. ಬ್ಯಾಟಿಂಗ್- ಬೌಲಿಂಗ್​ನಲ್ಲಿ ಎಡವಿದ ರೋಹಿತ್ ಪಡೆ ಕಳಪೆ ಪ್ರದರ್ಶನ ತೋರಿತ್ತು. ಸದ್ಯ ಎರಡನೇ ಪಂದ್ಯಕ್ಕೆ ಸಜ್ಜಾಗಿರುವ ಭಾರತ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಹೀಗಾಗಿ ತಂಡದಲ್ಲಿ ಪ್ರಮುಖ ಮೂರು ಬದಲಾವಣೆ ಮಾಡುವ ಸಾಧ್ಯತೆಯಿದೆ.
India vs Bangladesh 2nd T20I: 3 changes India should make to get back to winning ways in 2nd T20I against Bangladeshಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಆರಂಭ ಪಡೆದುಕೊಂಡ ರಿಷಭ್ ಪಂತ್ ಬಳಿಕ ಮಂಕಾಗಿ ಹೋದರು. ಅನೇಕ ಅವಕಾಶ ನೀಡುತ್ತಿದ್ದರು ಅದನ್ನು ಉಪಯೋಗ ಪಡಿಸಿಕೊಳ್ಳುವಲ್ಲಿ ಪಂತ್ ವಿಫಲರಾಗುತ್ತಿದ್ದಾರೆ. ಮುಂದಿನ ವರ್ಷ ವಿಶ್ವಕಪ್ ಟಿ-20 ಟೂರ್ನಿ ಇರುವುದರಿಂದ ಪಂತ್ ಜೊತೆ ಮತ್ತೊಬ್ಬ ಸೂಕ್ತ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಅಗತ್ಯ ಟೀಂ ಇಂಡಿಯಾಕ್ಕಿದೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿ ಮಿಂಚಿದ ಸಂಜು ಸ್ಯಾಮ್ಸನ್​ ಸುಮಾರು ಮೂರು ವರ್ಷಗಳ ಬಳಿಕ ಟೀಂ ಇಂಡಿಯಾಕ್ಕೆ ಆಯ್ಕೆಯಾದರು. ಆದರೆ, ಮೊದಲ ಟಿ-20 ಪಂದ್ಯದಲ್ಲಿ ಇವರಿಗೆ ಅವಕಾಶ ಸಿಗಲಿಲ್ಲ. ವಿಜಯ್ ಹಜಾರೆ ಟ್ರೋಪಿಯ 8 ಪಂದ್ಯಗಳಲ್ಲಿ 410 ರನ್ ಕಲೆಹಾಕಿದ ಸ್ಯಾಮ್ಸನ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಎರಡನೇ ಟಿ-20 ಪಂದ್ಯದಲ್ಲಿ ಪಂತ್ ಬದಲು ಇವರಿಗೆ ಅವಕಾಶ ಸಿಗುವುದು ದಟ್ಟವಾಗಿದೆ.

ಟಿ-20 ಕ್ರಿಕೆಟ್​ನಲ್ಲಿ ಪವರ್ ಪ್ಲೇ ಅನ್ನು ಸೂಕ್ತವಾಗಿ ಉಪಯೋಗಿಸುವ ಆಟಗಾರ ಬೇಕು. ಆದರೆ, ಓಪನರ್ ಶಿಖರ್ ಧವನ್ ಇತ್ತೀಚೆಗೆ ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಕಳೆದ ಪಂದ್ಯದಲ್ಲೂ ಧವನ್ ಇದೇ ಆಟದ ಮೊರೆಹೋಗಿದ್ದರು. ಹೀಗಾಗಿ ಧವನ್ ಬದಲು ಮನೀಶ್ ಪಾಂಡೆಗೆ ಆಡುವ ಬಳಗದಲ್ಲಿ ಅವಕಾಶ ಕೊಟ್ಟರೆ ಮಧ್ಯಮ ಕ್ರಮಾಂಕದಲ್ಲಿ ಆರ್ಭಟಿಸಬಲ್ಲರು. ಪಾಂಡೆ ಕಳೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ನಾಯಕನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

Image result for khaleel ahmed 1ST T20Iಮೊದಲ ಟಿ-20 ಪಂದ್ಯ ಭಾರತ ಪಂದ್ಯ ಕೈಚೆಲ್ಲಲು ಖಲೀಲ್ ಅಹ್ಮದ್​ ಮಾಡಿದ 19ನೇ ಓವರ್ ಕೂಡ ಒಂದು ಕಾರಣ. ಆ ಓವರ್​ನಲ್ಲಿ ಖಲೀಲ್ ಬರೋಬ್ಬರಿ 19 ರನ್ ನೀಡಿದ ದುಬಾರಿ ಎನಿಸಿಕೊಂಡರು. ಇದು ಬಾಂಗ್ಲಾದೇಶ ಗೆಲ್ಲಲು ಮುಖ್ಯ ಕಾರಣವಾಯಿತು. ಹೀಗಾಗಿ 2ನೇ ಟಿ-20 ಗೆ ಖಲೀಲ್ ಬದಲು ಬೆಂಚ್ ಕಾಯುತ್ತಿರುವ ಶಾರ್ದೂಲ್ ಠಾಕೂರ್​ಗೆ ಅವಕಾಶ ನೀಡಿದರೆ ಉತ್ತಮ.

Image result for 2nd T20I in Rajkot
ಒಟ್ಟಾರೆ ನಾಳಿನ ಪಂದ್ಯ ಉಭಯ ತಂಡಗಳಿಗೆ ಮುಖ್ಯವಾಗಿದೆ. ಭಾರತ ಗೆದ್ದರೆ ಸರಣಿ ಸಮಬಲವಾಗಲಿದೆ. ಎಲ್ಲಾದರು ಬಾಂಗ್ಲಾ ಜಯ ಸಾಧಿಸಿದರೆ ಸರಣಿ ವಶಪಡಿಸಿಕೊಳ್ಳಲಿದೆ. ಹೀಗಾಗಿ ರೋಹಿತ್ ಪಡೆ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುವ ಅಂದಾಜಿನಲ್ಲಿದೆ.

ಟ್ಯಾಗ್ಸ್ : ನರೇಂದ್ರ ಮೋದಿ, ಅಮಿತ್‌ ಶಾ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ , ರಾಜಕುಮಾರ್, ಸುದೀಪ್, ದರ್ಶನ, ಚಿಕ್ಕಣ್ಣ, ಸಲ್ಮಾನ್ ಖಾನ್, ಶಾರುಖಾನ್

Leave A Comment

Your email address will not be published. Required fields are marked *