ಮೋದಿ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದ ಕೈ ಬಿಡುವಂತೆ ಒತ್ತಾಯಿಸಿ ರೈತರಿಂದ ಭುಗಿಲೆದ್ದ ಪ್ರತಿಭಟನೆ

Related image

ಬೆಂಗಳೂರು: ಕೇಂದ್ರ ಸರ್ಕಾರದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದವನ್ನು(ಆರ್ ಸಿಇಪಿ) ಕೈಬಿಡುವಂತೆ ರಾಜ್ಯಾಧ್ಯಂತ ರೈತ ಸಂಘಗಳು ಹಾಗೂ ಕಾಂಗ್ರೆಸ್ ಪ್ರತಿಭಟನೆ ನಡೆಸಿದರು.

ಆರ್ ಸಿಇಪಿ ಒಡಂಬಡಿಕೆಗೆ ಕೇಂದ್ರದ ನಿರ್ಧಾರವನ್ನ ಖಂಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ನೇತೃತ್ವದಲ್ಲಿ ಕೆಪಿಸಿಸಿ ಕಿಸಾನ್ ಘಟಕದಿಂದ ರೈಲ್ ರೋಕೋ ಚಳುವಳಿ ನಡೆಸಿದರು.

ಮುಕ್ತ ವ್ಯಾಪಾರ ಒಪ್ಪಂದ ಕೈ ಬಿಡುವಂತೆ ಒತ್ತಾಯಿಸಿ ರೈತರು ಮತ್ತು ಕಾಂಗ್ರೆಸ್​ನಿಂದ ರಾಜ್ಯಾದ್ಯಂತ ಪ್ರತಿಭಟನೆ

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ , ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು. ರೈತರನ್ನ ಹಾಗೆ ಮಾಡ್ತೀವಿ, ಹೀಗೆ ಮಾಡ್ತೀವಿ ಅಂದ್ರು.

ಆದ್ರೆ ಈಗ ಮಾಡ್ತಿರೋದು ಏನು..? ಜಪಾನ್,ಕೊರಿಯಾ ಜೊತೆ ಮುಕ್ತವ್ಯಾಪಾರಕ್ಕೆ ಹೊರಟಿದೆ. ಸಹಿ ಹಾಕಿ ರೈತರನ್ನ ಬಲಿಕೊಡಲು ಹೊರಟಿದೆ. ಈಗಲೇ ರೈತರ ಸಂಕಷ್ಟದಲ್ಲಿದ್ದಾನೆ. ರಾಜ್ಯ ಪ್ರವಾಹ, ಬರದಿಂದ ತತ್ತರಿಸುತ್ತಿದೆ. ಇಂತ ಸಂದರ್ಭದಲ್ಲೇ ಈ ನೀತಿಗೆ ಒಪ್ಪಿದರೆ ಹೇಗೆ? ಎಂದು ಪ್ರಶ್ನಿಸಿದರು.

Image result for modi rcep

ಒಪ್ಪಂದಕ್ಕೆ ಯಾವುದೇ ಕಾರಣಕ್ಕೂ ಸಹಿಯಾಕಬಾರದು. ಕೃಷಿ ಉತ್ಪನ್ನಗಳ ಬೆಲೆ ಕುಸಿಯುತ್ತದೆ. ಅಡಿಕೆ, ತೆಂಗು, ಟೊಮಾಟೋ, ಸಾಂಬಾರ್ ಪದಾರ್ಥ, ಹಾಲಿನ ಬೆಲೆಯೂ ಕುಸಿಯಲಿದೆ. 10 ಕೋಟಿ ಹಾಲು ಉತ್ಪಾದಕರು ಕಷ್ಟಕ್ಕೆ ಸಿಲುಕ್ತಾರೆ.

ಗುಜರಾತ್ ನಂತರ ನಮ್ಮ ರಾಜ್ಯವೇ ಪ್ರಮುಖ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಒಪ್ಪಂದ ಆದ್ರೆ ರೈತರು ಬೀದಿಗೆ ಬೀಳ್ತಾರೆ. ಪ್ರಧಾನಿ ಮೋದಿಗೂ ಇದೇ ಬೇಕಾಗಿದೆ. ರೈತರನ್ನ ಬೀದಿಗೆ ಹಾಕಲು ಹೊರಟಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು

Related image

ಕೀ ಟ್ಯಾಗ್ಸ್: ನರೇಂದ್ರ ಮೋದಿ ,ಬಿ.ಎಸ್.ಯಡಿಯೂರಪ್ಪ ,ಸಿದ್ದರಾಮಯ್ಯ ,ಮಹೇಂದ್ರ ಸಿಂಗ್ ಧೋನಿ ,ವಿರಾಟ್ ಕೊಹ್ಲಿ,ರಾಹುಲ್ ಗಾಂಧಿ,ಎಚ್.ಡಿ.ಕುಮಾರಸ್ವಾಮಿ,ಸುದೀಪ್, ಡಿ.ಕೆ.ಶಿವಕುಮಾರ್, ಉಪೇಂದ್ರ,

Leave A Comment

Your email address will not be published. Required fields are marked *