‘ಸಚಿವ ಕೆ.ಎಸ್. ಈಶ್ವರಪ್ಪಗೆ ಇಂಥ ಸ್ಥಿತಿ ಬರಬಾರದಿತ್ತು…!?’

Image result for ks eshwarappa

ವಿಧಾನಸಭೆಯಲ್ಲಿ ಪ್ರವಾಹ ಪರಿಸ್ಥಿತಿ ವಿಚಾರವಾಗಿ ಚರ್ಚೆ ನಡೆದಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುವ ವೇಳೆಯಲ್ಲಿ ಸಚಿವರು ಮೌನವಾಗಿ ಕುಳಿತಿದ್ದಾರೆ.

Related image

ಸರ್ಕಾರದ ಪರವಾಗಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತ್ರ ಉತ್ತರಿಸುತ್ತಿದ್ದು, ಈ ವೇಳೆ ಸಚಿವರನ್ನು ಸಿದ್ದರಾಮಯ್ಯ ಕಿಚಾಯಿಸಿದ್ದಾರೆ. ಸಚಿವ ಕೆ.ಎಸ್. ಈಶ್ವರಪ್ಪಗೆ ಇಂತಹ ಸ್ಥಿತಿ ಬರಬಾರದಿತ್ತು. ಅವರಿಗೆ ಮಾತನಾಡುವ ಸ್ವಾತಂತ್ರ್ಯವೇ ಇಲ್ಲವಾಗಿದೆ. ನೀವ್ಯಾರು ಮಾತನಾಡಬೇಡಿ ಎಂದು ಸಿಎಂ ಹೇಳಿದ್ದಾರೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Related image

ನಾನು ಮುಖ್ಯಮಂತ್ರಿಯಾಗಿದ್ದಾಗ ಹೈಕಮಾಂಡ್ ಮಧ್ಯ ಪ್ರವೇಶಿಸಲಿಲ್ಲ. ಆಡಳಿತದಲ್ಲಿ ಹೈಕಮಾಂಡ್ ಎಂದಿಗೂ ಮಧ್ಯ ಪ್ರವೇಶಿಸಿರಲಿಲ್ಲ. ಆದರೆ, ಯಡಿಯೂರಪ್ಪನವರಿಗೆ ಇಂತಹ ಪರಿಸ್ಥಿತಿ ಇದೆಯಾ? ಯಡಿಯೂರಪ್ಪ ಮುಖ್ಯಮಂತ್ರಿಯಾದ 20 ದಿನದ ನಂತರ ಸಂಪುಟ ವಿಸ್ತರಣೆ ಮಾಡಲಾಗಿದೆ. ಬಿಜೆಪಿ ವರಿಷ್ಠರಿಗೆ ಯಡಿಯೂರಪ್ಪ ಒಲ್ಲದ ಶಿಶು ಆಗಿದ್ದಾರೆ ಎಂದು ಟೀಕಿಸಿದ್ದಾರೆ.

ಕೀ ಟ್ಯಾಗ್ಸ್:ನರೇಂದ್ರ ಮೋದಿ, ದರ್ಶನ್, ರಮೇಶ್ ಜಾರಕಿಹೊಳಿ, ಜಗದೀಶ್ ಶೆಟ್ಟರ್, ಜಗ್ಗೇಶ್, ಅಮೂಲ್ಯ, ಆನಂದ್ ಸಿಂಗ್, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಮಹೇಂದ್ರ ಸಿಂಗ್ ಧೋನಿ, ಶಾರುಖ್ ಖಾನ್, ದೀಪಿಕಾಪಡುಕೋಣೆ, ಅಕ್ಷಯ್ ಕುಮಾರ್

Leave A Comment

Your email address will not be published. Required fields are marked *