ಏಮ್ಸ್ ಸೇರುವಂತೆ ಮಾಡ್ತು ಸೆಲ್ಫಿ ಹುಚ್ಚು

Image result for selfie girl

ಸೆಲ್ಫಿ ಹುಚ್ಚು ಹೆಚ್ಚಾಗ್ತಾ ಇದೆ. ಸೆಲ್ಫಿ ತೆಗೆಯಲು ಹೋಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೀಗ ಸೆಲ್ಫಿ ಅನೇಕರನ್ನು ಆಸ್ಪತ್ರೆ ಸೇರುವಂತೆ ಮಾಡಿದೆ. ಕಳೆದ ಕೆಲ ತಿಂಗಳಿಂದ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೂರು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಸೆಲ್ಫಿಸೈಡ್ ಖಾಯಿಲೆಯಿಂದ ಬಳಲುತ್ತಿರುವ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಾ ಇದೆ.

ಇದೊಂದು ಮಾನಸಿಕ ಖಾಯಿಲೆಯಾಗಿದೆ. ಮೊದಲು ಕನ್ನಡಿಯಲ್ಲಿ ತಮ್ಮ ಮುಖವನ್ನು ಪದೇ ಪದೇ ನೋಡಿಕೊಳ್ಳುತ್ತಿದ್ದವರು ಈಗ ಫೋನ್ ಬಳಸುತ್ತಿದ್ದಾರೆ. ಪ್ರತಿದಿನ ಸುಂದರವಾಗಿ ಕಾಣಬೇಕೆನ್ನುವುದು ಇವರ ಉದ್ದೇಶ. ಕ್ಷಣಕ್ಕೊಮ್ಮೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡುವ ಇವರು ಫಾಲೋವರ್ಸ್ ಕಮೆಂಟ್ ಪಡೆಯಲು ಕಾತರರಾಗಿರ್ತಾರೆ.

Image result for selfie girl

ಈ ವ್ಯಾಧಿಯಿಂದ ಬಳಲುತ್ತಿರುವ ಕಾಲೇಜು ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಿದ ಏಮ್ಸ್ ವೈದ್ಯ ನಂದಕುಮಾರ್ ಪ್ರಕಾರ, ಸೆಲ್ಫಿಗಾಗಿ ಆಕೆ ಎಲ್ಲವನ್ನೂ ಬಿಟ್ಟಿದ್ದಾಳಂತೆ. ಕಾಲೇಜಿಗೆ ಸರಿಯಾಗಿ ಹೋಗದ ಹುಡುಗಿ ಸದಾ ಕೈನಲ್ಲಿ ಮೊಬೈಲ್ ಹಿಡಿದುಕೊಂಡು ಸೆಲ್ಫಿ ತೆಗೆಯುತ್ತಿದ್ದಳಂತೆ. ಅದನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕುವುದು ಆಕೆ ಕೆಲಸವಾಗಿದ್ದು, ಊಟ, ತಿಂಡಿಯನ್ನು ಸರಿಯಾಗಿ ಮಾಡ್ತಿರಲಿಲ್ಲವಂತೆ.

Related image

ಶ್ರೀ ಗಂಗಾರಾಮ್ ಆಸ್ಪತ್ರೆಯಲ್ಲಿ ಕೂಡ ಅನೇಕರಿಗೆ ಚಿಕಿತ್ಸೆ ನೀಡಲಾಗಿದೆಯಂತೆ. ನಗ್ನ ಸೆಲ್ಫಿ ತೆಗೆದು ಬಾಯ್ ಫ್ರೆಂಡ್ ಗೆ ಕಳುಹಿಸಿ ನಂತ್ರ ತೊಂದರೆ ಅನುಭವಿಸಿ ಆಸ್ಪತ್ರೆ ಸೇರಿದ ಹುಡುಗಿಗೆ ಚಿಕಿತ್ಸೆ ನೀಡುತ್ತಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ.

ಅಮೆರಿಕಾ ಸೈಕಲಾಜಿಕಲ್ ಅಸೋಸಿಯೇಷನ್ ಪ್ರಕಾರ ಸುಮಾರು ಶೇಕಡಾ 60ರಷ್ಟು ಮಹಿಳೆಯರು ಈ ಸೆಲ್ಫಿಸೈಡ್ ಖಾಯಿಲೆಯಿಂದ ಬಳಲುತ್ತಾರಂತೆ. ಆದ್ರೆ ಅದು ಅವರಿಗೆ ತಿಳಿದಿರುವುದಿಲ್ಲ ಎನ್ನುತ್ತಾರೆ ತಜ್ಞರು.

ಕೀ ಟ್ಯಾಗ್ಸ್:ನರೇಂದ್ರ ಮೋದಿ ,ಬಿ.ಎಸ್.ಯಡಿಯೂರಪ್ಪ ,ಸಿದ್ದರಾಮಯ್ಯ ,ರಣವೀರ್ ಸಿಂಗ್ ,ಮಹೇಂದ್ರ ಸಿಂಗ್ ಧೋನಿ,ವಿರಾಟ್ ಕೊಹ್ಲಿ, ಶಾರುಖ್ ಖಾನ್,ದೀಪಿಕಾಪಡುಕೋಣೆ,ಅಕ್ಷಯ್ ಕುಮಾರ್

Leave A Comment

Your email address will not be published. Required fields are marked *