ಸ್ಟಾರ್ ನಟನ ಮಗನೊಂದಿಗೆ ನಟಿಸಲು ನೋ ಎಂದ ಹಾಟ್ ಬ್ಯೂಟಿ!

Related image

ನಾಗಾರ್ಜುನ ಪುತ್ರ ಅಕ್ಕಿನೇನಿ ಅಖಿಲ್ ಹೊಸ ಸಿನಿಮಾ ಸೆಟ್ಟೇರಿದ್ದು ಈ ಚಿತ್ರಕ್ಕೆ ‘ಬೊಮ್ಮರಿಲ್ಲು’ ಖ್ಯಾತಿಯ ಭಾಸ್ಕರ್ ನಿರ್ದೇಶಿಸುತ್ತಿದ್ದಾರೆ. ಸದ್ಯ ಈ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಈ ಚಿತ್ರದ ಹೀರೋಯಿನ್ ಆಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದರು.

Image result for ಅಕ್ಕಿನೇನಿ ಅಖಿಲ್

ಇನ್ನೇನು ಸೆಟ್ಸ್‌ಗೆ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಲೇಟೆಸ್ಟ್ ಸಮಾಚಾರದ ಪ್ರಕಾರ ಪೂಜಾ ಹೆಗ್ಡೆ ಸಿನಿಮಾಗೆ ಕೈಕೊಟ್ಟಿದ್ದಾರಂತೆ. ಇದಕ್ಕೆ ಕಾರಣ ವಾಗಿರುವುದು ಸಂಭಾವನೆ. ಈ ಚಿತ್ರಕ್ಕಾಗಿ ಪೂಜಾ ಹೆಗ್ಡೆ ಸಿಕ್ಕಾಪಟ್ಟೆ ಸಂಭಾವನೆಯ ಬೇಡಿಕೆ ಮುಂದಿಟ್ಟಿದ್ದರು ಎಂದಿವೆ ಮೂಲಗಳು.

Image result for pooja hegde hot

ಹಾಗಾಗಿ ಪೂಜಾ ಅವರನ್ನು ಚಿತ್ರತಂಡ ಕೈಬಿಟ್ಟಿದ್ದು ಹೊಸ ಹೀರೋಯಿನ್ ಹುಡುಕಾಟದಲ್ಲಿದೆಯಂತೆ ಎಂಬ ಮಾತುಗಳು ಟಾಲಿವುಡ್ ವಲಯದಿಂದ ಬಂದಿವೆ. ಶೀಘ್ರದಲ್ಲೇ ಹೊಸ ಹೀರೋಯಿನ್ ಆಯ್ಕೆ ಅಂತಿಮವಾಗಲಿದೆಯಂತೆ.

Image result for pooja hegde hot

ಮಹೇಶ್ ಬಾಬು ಅಭಿನಯದ ‘ಮಹರ್ಷಿ’ ಚಿತ್ರದಲ್ಲಿ ನಟಿಸಿ ಸಕ್ಸಸ್ ಖುಷಿಯಲ್ಲಿರುವ ಪೂಜಾ ಹೆಗ್ಡೆ ಸದ್ಯಕ್ಕೆ ಟಾಲಿವುಡ್‌ನ ಬಲು ಬೇಡಿಕೆಯ ತಾರೆ. ಈ ಹಿಂದೆ ಬಾಲಿವುಡ್‌ನಲ್ಲಿ ಸ್ಟಾರ್ ನಟ ಹೃತಿಕ್ ರೋಷನ್ ಅವರಿಗೆ ಜೋಡಿಯಾಗಿ ‘ಮೊಹೆಂಜೋದಾರೊ’ ಚಿತ್ರದಲ್ಲಿ ನಟಿಸಿದ್ದರು.

ಸದ್ಯ ಜೂನಿಯರ್ ಎನ್‌ಟಿಆರ್ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪೂಜಾ, ಸೋಷಿಯಲ್ ಮೀಡಿಯಾದಲ್ಲಿ ಸಹ ಸಖತ್ ಬ್ಯುಸಿಯಾಗಿದ್ದಾರೆ.

Image result for pooja hegde hot

Leave A Comment

Your email address will not be published. Required fields are marked *