ಈತ ಕೈಯಲ್ಲಿ ಮಾಡಬೇಕಾದ ಕೆಲಸವನ್ನು ಕಾಲಿನಲ್ಲಿ ಮಾಡಿ ಅಸಹ್ಯ ಮೂಡಿಸಿದ! ಮುಂದೇನಾಯಿತು?

ಕೈಯಲ್ಲಿ ಮಾಡಬೇಕಾದ ಕೆಲಸವನ್ನು ಕಾಲಲ್ಲಿ ಮಾಡಿದ ಈತ ಟ್ವಿಟಿಗರಿಂದ ಹಿಗ್ಗಾಮುಗ್ಗಾ ಬೈಸಿಕೊಳ್ಳುತ್ತಿದ್ದಾನೆ. ಈತನನ್ನು ಜೈಲಿಗೇ ಹಾಕಬೇಕು ಎಂದು ಕೂಡ ಕೆಲವರು ಟ್ವೀಟ್​ ಮಾಡಿದ್ದಾರೆ. ಸದ್ಯ ಟ್ವಿಟರ್​ನಲ್ಲಿ ವೈರಲ್​ ಆಗಿರುವ ವಿಡಿಯೋದಿಂದ ಈ ರೀತಿಯ ಜನರೂ ಇರುತ್ತಾರಾ? ಅಸಹ್ಯ ಎಂಬಂತಹ ಮಾತುಗಳು ಕೇಳಿಬರುತ್ತಿವೆ.

ಈ ಘಟನೆ ನಡೆದಿದ್ದು ವಿಮಾನದಲ್ಲಿ. ಒಬ್ಬಾತ ತನ್ನ ಸೀಟ್​ ಮೇಲೆ ಕುಳಿತುಕೊಂಡಿದ್ದಾನೆ. ಆತನ ಎದುರಿನ ಖಾಲಿ ಜಾಗದಲ್ಲಿ ಸಣ್ಣ ಟಿವಿ ಇದೆ. ಆ ಟಿವಿ ಟಚ್​ಸ್ಕ್ರೀನ್​ ಆಗಿದೆ. ನಮಗೆ ಬೇಕಾದ ಸಿನಿಮಾ, ಮನರಂಜನೆ ಆಯ್ಕೆ ಮಾಡಿಕೊಳ್ಳಬೇಕಾದರೆ ಕೈಯಲ್ಲಿ ಮಾಡಿಕೊಳ್ಳಬೇಕು. ಆದರೆ ಈತ ತನ್ನೆರಡೂ ಕಾಲುಗಳನ್ನೂ ಆ ಟಿವಿಯ ಅಕ್ಕಪಕ್ಕ ಇಟ್ಟುಕೊಂಡು ಆರಾಮಾಗಿ ಕುಳಿತಿದ್ದ. (ಚಪ್ಪಲಿ ಹಾಕಿರಲಿಲ್ಲ )ಸ್ವಲ್ಪ ಸಮಯದ ಬಳಿಕ ತನ್ನ ಕಾಲಿನಿಂದಲೇ ಟಿವಿಯನ್ನು ಆಪರೇಟ್​ ಮಾಡಿದ. ತನಗೆ ಬೇಕಾದ ಕಾರ್ಯಕ್ರಮ ಆಯ್ಕೆಯನ್ನು ಕಾಲು ಬೆರಳುಗಳಲ್ಲೇ ಮಾಡಿದ. ಹೀಗೆ ಆತ ಎರಡು ಬಾರಿ ಮಾಡಿದ್ದನ್ನು ಅಲ್ಲಿಯೇ ಹಿಂದೆ ಕುಳಿತಿದ್ದವರು ಅದನ್ನು ಚಿತ್ರೀಕರಿಸಿದ್ದಾರೆ. ಅದನ್ನು ಮತ್ತೊಬ್ಬರು ಟ್ವಿಟರ್​ನಲ್ಲಿ ಶೇರ್​ ಮಾಡಿ ಅಸಹ್ಯ ವ್ಯಕ್ತಪಡಿಸಿದ್ದಾರೆ.

Image result for My friend who doesn’t have twitter sent this from her flight. It belongs on Twitter

ನ್ಯೂಯಾರ್ಕ್​ನ ಲೇಖಕಿ ಅಲ್ಫೇರ್​ ಬರ್ಕ್​ ಎಂಬುವರು ವಿಡಿಯೋವನ್ನು ಟ್ವೀಟ್​ ಮಾಡಿದ್ದು, ಇದನ್ನು ನನಗೆ ಕಳಿಸಿದ್ದು ನನ್ನ ಸ್ನೇಹಿತೆ. ಆಕೆಯದ್ದು ಟ್ವಿಟರ್​ ಅಕೌಂಟ್​ ಇಲ್ಲ. ಆಕೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕಂಡ ದೃಶ್ಯವನ್ನು ವಿಡಿಯೋ ಮಾಡಿ ಕಳಿಸಿದ್ದಾಳೆ ಎಂದು ಪೋಸ್ಟ್​ ಮಾಡಿದ್ದಾರೆ.

Image result for My friend who doesn’t have twitter sent this from her flight. It belongs on Twitterಇದನ್ನು ನೋಡಿದ ನೆಟ್ಟಿಗರು ತೀವ್ರ ಅಸಹ್ಯಪಟ್ಟುಕೊಂಡಿದ್ದಾರೆ. ಇಷ್ಟು ಗಲೀಜಾಗಿ ಯಾಕೆ ವರ್ತಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಕೆಲವರಂತೂ ಇನ್ನು ಮುಂದೆ ವಿಮಾನದಲ್ಲಿ ಪ್ರಯಾಣ ಮಾಡುವುದಾಗಿ ಏನನ್ನೂ ಮುಟ್ಟುವುದಿಲ್ಲ ಎಂದು ಹೇಳಿದ್ದಾರೆ. ಹಾಗೇ ಮತ್ತೋರ್ವರು ಒಂದಿಷ್ಟು ಕೊಳೆಯಾದ ಟಿಶ್ಯು ಪೇಪರ್​ಗಳ ಫೋಟೋ ಟ್ವೀಟ್​ ಮಾಡಿ, ಇತ್ತೀಚೆಗೆ ವಿಮಾನದಲ್ಲಿ ಹೋಗುತ್ತಿದ್ದಾಗ ನನ್ನ ಸೀಟ್​ ಬಳಿ ಸ್ವಚ್ಛ ಮಾಡಿಕೊಂಡೆ. ವಿಮಾನ ಸಿಬ್ಬಂದಿ ಏನನ್ನೂ ಮಾಡುವುದಿಲ್ಲ. ಸರಿಯಾಗಿ ನಿರ್ವಹಣೆಯನ್ನೂ ಮಾಡುವುದಿಲ್ಲ ಎಂದು ಕಾಮೆಂಟ್​ ಬರೆದಿದ್ದಾರೆ. ಇವನೊಬ್ಬ ಮಹಾನ್​ ಸೋಮಾರಿ ಎಂದೂ ಕೋಪ ವ್ಯಕ್ತಪಡಿಸಿದ್ದಾರೆ.

Image result for My friend who doesn’t have twitter sent this from her flight. It belongs on Twitterಹಾಗೆ ಇನ್ನೋರ್ವರು, ನನಗೆ ಪಾದಗಳಲ್ಲಿ ಸಮಸ್ಯೆ ಇದೆ. ಹಾಗಾಗಿ ಇಂಥದ್ದನ್ನೆಲ್ಲ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬೇರೆಯವರಿಗೆ ಇದೆಲ್ಲ ಅಸಹ್ಯ ಎನ್ನಿಸುತ್ತದೆ. ಈ ಮನುಷ್ಯನ್ನು ಜೈಲಿಗೆ ಕಳಿಸಬೇಕು ಎಂದಿದ್ದಾರೆ.

(ತಾಜಾ ಸುದ್ದಿಗಳನ್ನು ಓದಲು OperaNews ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ)

Leave A Comment

Your email address will not be published. Required fields are marked *