ಈ ನಾಯಕನನ್ನು ಕಡೆಗಣಿಸಿದರೆ ಕಾಂಗ್ರೆಸ್ ಗೆ ಕೈತಪ್ಪಲಿದೆ ಮೇಯರ್ ಸ್ಥಾನ !

Image result for bbmp mayor

ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ರಾಜಕೀಯವಾಗಿ ಕಡೆಗಣಿಸಿದರೆ ಈ ಬಾರಿ ಬಿಬಿಎಂಪಿಯ ಮೇಯರ್ ಸ್ಥಾನ ಕಾಂಗ್ರೆಸ್ ಕೈತಪ್ಪುವ ಸಾಧ್ಯತೆಗಳಿವೆ.  ಬೆಂಗಳೂರು ಮಹಾನಗರ ರಾಜಕೀಯದಲ್ಲಿ ಯಾರೇ ಸಚಿವರಾದರೂ ರಾಮಲಿಂಗಾರೆಡ್ಡಿ ಅವರೇ ಅದ್ವಿತೀಯ ನಾಯಕ. ಬೆಂಗಳೂರಿನಲ್ಲಿ ಯಾವುದೇ ಚುನಾವಣೆಗಳಾದರೂ ರೆಡ್ಡಿ ಅವರ ಪ್ರಭಾವ ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಬೆಂಬಲಿಗರು ಹೇಳುತ್ತಿದ್ದಾರೆ.

Image result for bbmp mayor ramlingareddy

ಬಿಬಿಎಂಪಿಯ ಕಾಂಗ್ರೆಸ್ ಸದಸ್ಯರು ರಾಮಲಿಂಗಾರೆಡ್ಡಿ ಅವರ ಮಾತಿಗೆ ಹೆಚ್ಚು ಗೌರವ ಕೊಡುತ್ತಾರೆ. ಈವರೆಗೂ ಬಿಬಿಎಂಪಿಯಲ್ಲಿ ಮೇಯರ್ ಆಯ್ಕೆ ವೇಳೆ ರೆಡ್ಡಿ ಅವರ ಮಾತೇ ಅಂತಿಮ. ಅವರ ಕಾರ್ಯತಂತ್ರವೇ ಯಶಸ್ವಿ ಎಂಬ ಮಾತುಗಳು ಚಾಲ್ತಿಯಲ್ಲಿವೆ.

Image result for bbmp mayor ramlingareddy

ರಾಮಲಿಂಗಾರೆಡ್ಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಸಚಿವರಾಗುತ್ತಿದ್ದರು. ಕಳೆದ ಸರ್ಕಾರದಲ್ಲಿ ಗೃಹಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿದ್ದಲ್ಲದೆ ಸರಳತೆಯ ಸಚಿವ ಎಂಬ ಖ್ಯಾತಿಗೂ ಹೆಸರಾಗಿದ್ದರು. ಆದರೆ ರಾಜಕೀಯ ಏರಿಳಿತಗಳಲ್ಲಿ ಈ ಬಾರಿ ರಾಮಲಿಂಗಾರೆಡ್ಡಿ ಅವರನ್ನು ಅಧಿಕಾರದಿಂದ ದೂರವಿಡಲಾಗಿದೆ.ಮೇಯರ್ ಚುನಾವಣೆ ಸಮೀಪಿಸತ್ತಿದ್ದು, 4ನೇ ಅವಧಿಗೆ ಮತ್ತೆ ಕಾಂಗ್ರೆಸ್‍ನವರೇ ಮೇಯರ್ ಆಗಬೇಕೆಂದಾದರೆ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲವಾದರೆ  ಪಕ್ಷೇತರರು ಕೈಗೆ ಸಿಗುವುದಿಲ್ಲ, ಕಾಂಗ್ರೆಸ್‍ನ ಬಹಳಷ್ಟು ಸದಸ್ಯರು ತಟಸ್ಥವಾಗಿ ಉಳಿದು, ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ.

Image result for bbmp mayor ramlingareddy

(ತಾಜಾ ಸುದ್ದಿಗಳಿಗಾಗಿ OperaNews ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ)

 

Leave A Comment

Your email address will not be published. Required fields are marked *